ಕರ್ನಾಟಕ

karnataka

ETV Bharat / bharat

ಕಾಲ್ನಡಿಗೆಯಲ್ಲೇ ನದಿ ದಾಟಿ ತಪಾಸಣೆ ಮಾಡಿದ ಆರೋಗ್ಯ ಕಾರ್ಯಕರ್ತೆ

ಛತ್ತೀಸ್​ಘಢದಲ್ಲಿ ಭಾರೀ ಮಳೆಯಿಂದಾಗಿ ಕೆಲವು ಹಳ್ಳಿಗಳು ಸಂಪರ್ಕ ಕಳೆದುಕೊಂಡಿವೆ. ಈ ನಡುವೆ ಹಳ್ಳಿಯೊಂದರಲ್ಲಿ ಮಹಿಳಾ ಆರೋಗ್ಯ ಕಾರ್ಯಕರ್ತೆಯೊಬ್ಬರು ಕಾಲ್ನಡಿಗೆಯಲ್ಲೇ ನದಿ ದಾಟಿ, ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡಿದ್ದಾರೆ.

health worker

By

Published : Sep 17, 2019, 4:35 PM IST

ಛತ್ತೀಸ್​ಘಢ:ದೇಶದ ಹಲವೆಡೆ ಅತಿವೃಷ್ಟಿಯಿಂದ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ಛತ್ತೀಸ್​ಘಢದಲ್ಲಿ ಭಾರೀ ಮಳೆಯಿಂದಾಗಿ ಕೆಲವು ಹಳ್ಳಿಗಳು ಸಂಪರ್ಕ ಕಳೆದುಕೊಂಡಿವೆ. ಈ ನಡುವೆ ಬಲರಾಮ್​ಪುರ ಎಂಬ ಹಳ್ಳಿಯಲ್ಲಿ ಮಹಿಳಾ ಆರೋಗ್ಯ ಕಾರ್ಯಕರ್ತೆಯೊಬ್ಬರು ಮಾನಿವೀಯತೆ ಮೆರೆದು ಸುದ್ದಿಯಾಗಿದ್ದಾರೆ.

ಇಲ್ಲಿನ ಆರೋಗ್ಯ ಕಾರ್ಯಕರ್ತೆ ಕಾಲ್ನಡಿಗೆಯಲ್ಲೇ ನದಿ ದಾಟಿ ಹೋಗಿ ಹಳ್ಳಿ ತಲುಪಿ ಅಲ್ಲಿನ ಜನರ ಆರೋಗ್ಯ ತಪಾಸಣೆ ಮಾಡಿದ್ದಾರೆ.

ಆರೋಗ್ಯ ತಪಾಸಣೆ ಮಾಡುತ್ತಿರುವ ಕಾರ್ಯಕರ್ತೆ

"ನದಿಯಲ್ಲಿ ನೀರು ಅಧಿಕವಾಗಿತ್ತು; ಆರಂಭದಲ್ಲಿ ನದಿ ದಾಟಲು ಭಯಗೊಂಡಿದ್ದೆ. ಆದರೆ ನಿಧಾನವಾಗಿ ನಡೆದು ನದಿ ದಾಟಿ ಹಳ್ಳಿ ತಲುಪಿದೆ" ಎಂದು ಆರೋಗ್ಯ ಕಾರ್ಯಕರ್ತೆ ಹೇಳಿದ್ದಾರೆ.

ಛತ್ತೀಸ್​ಘಢದ ದಕ್ಷಿಣ ಭಾಗದಲ್ಲಿ ಜೋರಾಗಿ ಮಳೆಯಾಗುತ್ತಿದ್ದು, ಇದರಿಂದ ನದಿಗಳು ಉಕ್ಕಿ ಹರಿಯುತ್ತವೆ. ಹಲವಾರು ನದಿಗಳು ಜಲಾವೃತವಾಗಿದ್ದು ಸಂಪರ್ಕಿಸುವುದೇ ಕಷ್ಟವಾಗಿದೆ. ಆದರೆ ಆರೋಗ್ಯ ಕಾರ್ಯಕರ್ತೆ ನಡೆದುಕೊಂಡೇ ನದಿ ದಾಟುವ ಮೂಲಕ ತಮ್ಮ ಕರ್ತವ್ಯನಿಷ್ಠೆ ಮೆರೆದಿದ್ದಾರೆ.

ABOUT THE AUTHOR

...view details