ಪಲಾಯಂ(ಕೇರಳ): 'ಆನೆ ನಡೆದದ್ದೇ ದಾರಿ' ಎನ್ನುವುದು ಜನಜನಿತ ಮಾತು. ಈ ಮಾತನ್ನು ಸಾರಿ ಹೇಳುವಂತಿದೆ ಟ್ವಿಟರ್ನಲ್ಲಿ ಹರಿದಾಡುತ್ತಿರುವ ಈ ವಿಡಿಯೋ.
'ಆನೆ ನಡೆದದ್ದೇ ದಾರಿ'..! ಇಲ್ಲಿದೆ ವಿಡಿಯೋ ಸಾಕ್ಷಿ.. - ಕೇರಳದಲ್ಲಿ ಪಲಾಯಂನಲ್ಲಿ ಕಂಬಿ ಮುರಿದ ಆನೆ
ಹೆಣ್ಣಾನೆಯೊಂದು ಡಿವೈಡರ್ನಲ್ಲಿ ಅಳವಡಿಸಲಾದ ಕಂಬಿ ಮುರಿದು ರಸ್ತೆ ದಾಟಿದೆ. ಈ ವೇಳೆ ಒಟ್ಟಾರೆ ಐದು ಆನೆಗಳು ರಸ್ತೆಯನ್ನು ದಾಟಿ ಕಾಡು ಸೇರಿವೆ.
ಆನೆ
ಹೆಣ್ಣಾನೆಯೊಂದು ರಸ್ತೆಯ ಡಿವೈಡರ್ನಲ್ಲಿ ಅಳವಡಿಸಲಾದ ಕಂಬಿಯನ್ನು ಮುರಿದು ರಸ್ತೆ ದಾಟಿದೆ. ಈ ವೇಳೆ ಒಟ್ಟಾರೆ ಐದು ಆನೆಗಳು ರಸ್ತೆಯನ್ನು ದಾಟಿ ಕಾಡು ಸೇರಿವೆ. ಈ ಘಟನೆ ಕೊಯಂಬತ್ತೂರು-ಮೆಟ್ಟುಪಾಳ್ಯಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡು ಬಂದಿದೆ. ಈ ವಿಶೇಷ ವಿಡಿಯೋ ಟ್ವಿಟರ್ನಲ್ಲಿ ಸದ್ದು ಮಾಡುತ್ತಿದೆ.