ಇಂದು ವಿಶ್ವ ಅಪ್ಪಂದಿರ ದಿನ. ಅಪ್ಪ ಎಂದರೆ ಬದುಕು... ಅಪ್ಪ ಎಂದರೆ ಉಸಿರು... ಅಪ್ಪ ಜೊತೆಗಿದ್ದಾರೆ ಎಂದರೆ ಆ ಧೈರ್ಯವೇ ಬೇರೆ. ಪ್ರತಿಯೊಬ್ಬರಿಗೂ ತಂದೆಯೇ ಮೊದಲ ಹೀರೋ. ಇಂತ ಹೀರೋಗೆ ನಿಮಗೆ ಏನ್ ಗಿಫ್ಟ್ ಕೊಡಬೇಕು ಅನ್ನೋದು ತಿಳಿಯುತ್ತಿಲ್ವಾ. ಹಾಗಾದ್ರೆ ನಾವಿಲ್ಲಿ ನಿಮಗೆ ಕೆಲವು ಇಡಿಯಾಗಳನ್ನು ನೀಡುತ್ತೇವೆ...
ತಂದೆಯ ನೆಚ್ಚಿನ ಚಟುವಟಿಕೆಗಳು:
ಪ್ರತಿಯೊಬ್ಬ ತಂದೆಯೂ ಒಂದೊಂದು ಹವ್ಯಾಸವನ್ನು ಹೊಂದಿರುತ್ತಾರೆ. ಆ ಹವ್ಯಾಸ ಅವರಿಗೆ ತುಂಬಾ ಇಷ್ಟವಾಗಿರುತ್ತದೆ. ಆದ್ರೆ ಇದರ ಬಗ್ಗೆ ನಿಮಗೆ ತಿಳಿದಿರುವುದಿಲ್ಲ. ಈ ದಿನದಂದು ಅವರಿಗೆ ಇಷ್ಟವಾದ ಹವ್ಯಾಸಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅವರಿಗೆ ಅವಕಾಶ ನೀಡಿ, ನೀವು ಅದನ್ನು ಆನಂದಿಸಿ.
ತಂದೆಯ ಸ್ನೇಹಿತರನ್ನು ಒಗ್ಗೂಡಿಸಿ ಡಿನ್ನರ್ ಆಯೋಜಿಸಿ:
ನಿಮ್ಮ ತಂದೆಯ ಎಲ್ಲ ಸ್ನೇಹಿತರನ್ನು ಈ ದಿನದಂದು ಒಗ್ಗೂಡಿಸಿ, ಅವರ ನೆಚ್ಚಿನ ರೆಸ್ಟೋರೆಂಟ್ಗೆ ಕರೆದುಕೊಂಡು ಹೋಗಿ ಭೋಜನ ಕೂಟ ಆಯೋಜಿಸುವ ಮೂಲಕ ಅಪ್ಪನನ್ನು ಆಶ್ಚರ್ಯಗೊಳಿಸಬಹುದು.
ಕುಟುಂಬ ಭೋಜನಾ:
ನಿಮ್ಮ ತಂದೆಗೆ ಪ್ರೀತಿ ಪಾತ್ರರಾದವರನ್ನು ಕರೆಸಿ ಜೊತೆಗೆ ಕುಟುಂಬದ ಸದಸ್ಯರೆಲ್ಲಾ ಈ ದಿನದಂದು ಒಟ್ಟಾಗಿ ಕೂತು ಭೋಜನ ಮಾಡಿ, ಕೆಲವು ಆಟಗಳನ್ನು ಆಡಿ ತಂದೆಯನ್ನು ಖುಷಿ ಪಡಿಸಿಬಹುದಲ್ಲವೇ.
ಸರೆಗಮಾ ಕಾರವಾನ್:
ನಿಮ್ಮ ತಂದೆಯೇನಾದ್ರೂ ಹಳೆಯ ಹಾಡುಗಳನ್ನು ಇಷ್ಟಪಡುವವರಾಗಿದ್ದರೇ, ರೇಡಿಯೋ, ಟಿವಿ, ಮೊಬೈಲ್ ಮೂಲಕ ಹಾಡುಗಳನ್ನು ಹಾಕಿ ಅವರನ್ನು ಸಂತೋಷಗೊಳಿಸಿ. ಇಲ್ಲವೇ ನಿಮ್ಮ ತಂದೆಯ ಕೈಯಲ್ಲಿ ಹಾಡನ್ನು ಹಾಡಿಸಿ ನಕ್ಕು ನಲಿಯಿರಿ.