ಕರ್ನಾಟಕ

karnataka

ETV Bharat / bharat

ಕಾಮುಕ ತಂದೆಯಿಂದ ಹೆಣ್ಣು ಮಕ್ಕಳ ಮೇಲೆ ರೇಪ್​​... ಪಾಪಿ ತಂದೆಯ ಬಂಧನ - ಹೆಣ್ಣು ಮಕ್ಕಳ ಮೇಲೆ ಕಾಮುಕ ತಂದೆ ರೇಪ್​

ಪಾಪಿ ತಂದೆಯೊಬ್ಬ ತನ್ನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ತೆಲಂಗಾಣದಲ್ಲಿ ನಡೆದಿದೆ.

FATHER RAPED HIS MINOR DAUGHTERS
FATHER RAPED HIS MINOR DAUGHTERS

By

Published : Feb 29, 2020, 9:37 PM IST

ಹೈದರಾಬಾದ್​:ಆಘಾತಕಾರಿ ಘಟನೆವೊಂದರಲ್ಲಿ ಕಾಮುಕ ತಂದೆ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರ ಎಸೆಗಿರುವ ಅಮಾನವೀಯ ಘಟನೆ ಇಲ್ಲಿನ ಮೆಡ್ಚಲ್​​ನ ದಿಂಡಿಗಲ್​​ನಲ್ಲಿ ನಡೆದಿದೆ.

ಕಳೆದ ಒಂದು ವರ್ಷದಿಂದ ದೊಡ್ಡ ಮಗಳ (14 ವರ್ಷ) ಮೇಲೆ ಅತ್ಯಾಚಾರ ಎಸಗಿರುವ ಕಾಮುಕ ತಂದೆ, ಕಳೆದ ಎರಡು ತಿಂಗಳಿಂದ 11 ವರ್ಷದ ಮಗಳ ಮೇಲೆ ಕೃತ್ಯ ಎಸಗುತ್ತಿದ್ದನು. ಘಟನೆ ಬಗ್ಗೆ ದೊಡ್ಡ ಮಗಳು ತಾಯಿ ಎದುರು ಹೇಳಿದ್ದಾಳೆ. ಆದರೆ, ಇದಕ್ಕೆ ತಲೆಕೆಡಿಸಿಕೊಳ್ಳದ ತಾಯಿ ಸುಮ್ಮನಾಗಿದ್ದಾಳೆ.

ಇದಾದ ಬಳಿಕ ನಿನ್ನೆ ರಾತ್ರಿ 11 ವರ್ಷದ ಮಗಳ ಮೇಲೆ ಗಂಡ ಕೃತ್ಯ ಎಸಗುತ್ತಿರುವುದನ್ನ ನೋಡಿರುವ ಪತ್ನಿ ಬಿಡಿಸಲು ಹೋಗಿದ್ದಾಳೆ. ಈ ವೇಳೆ, ಆಕೆಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಇದೇ ವೇಳೆ, ಮಗಳು ಕಿರುಚಾಡಿರುವ ಕಾರಣ ನೆರೆಹೊರೆಯವರು ಸೇರಿಕೊಂಡಿದ್ದಾರೆ. ಈ ವೇಳೆ, ಘಟನೆ ಬಗ್ಗೆ ಗೊತ್ತಾಗಿದ್ದು, ಆರೋಪಿಯನ್ನ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲು ಮಾಡಿಕೊಂಡು, ಕಾಮುಕನನ್ನು ಕಂಬಿ ಹಿಂದೆ ತಳ್ಳಿದ್ದಾರೆ. ಮೂಲತಃ ಬಿಹಾರದವರಾಗಿರುವ ಇವರು ಕಳೆದ ಎರಡು ವರ್ಷಗಳ ಹಿಂದೆ ದಿಂಡಿಗಲ್​​ನಲ್ಲಿ ಬಂದು ವಾಸವಾಗಿದ್ದರು.

ABOUT THE AUTHOR

...view details