ಸೂರತ್( ಗುಜರಾತ್): ತನ್ನ ನಿದ್ರೆಗೆ ತೊಂದರೆ ಮಾಡಿದ್ದಕ್ಕೆ ಎಂಟು ತಿಂಗಳ ಹೆಣ್ಣು ಮಗಳನ್ನು ಸ್ವತಃ ತಂದೆಯೇ ಕೊಂದ ಬರ್ಬರ ಹಾಗೂ ಹೀನಾಯ ಘಟನೆ ಗುಜರಾತ್ನಲ್ಲಿ ನಡೆದಿದೆ.
ನಿದ್ರೆಗೆ ತೊಂದರೆಯಾಗಿದ್ದಕ್ಕೆ 8 ತಿಂಗಳ ಮಗುವನ್ನೇ ಕೊಂದ ಪಾಪಿ - ಸಲಬತ್ಪುರ ಪೊಲೀಸ್ ಠಾಣೆ
ನಿದ್ರೆಗೆ ತೊಂದರೆ ಮಾಡಿದ್ದಕ್ಕೆ ಸ್ವತಃ ತಂದೆಯೇ ಮಗುವನ್ನು ಕೊಂದ ಘಟನೆ ಗುಜರಾತ್ನಲ್ಲಿ ನಡೆದಿದೆ.
ಮಗಳನ್ನು ಕೊಂದ ತಂದೆ
ಇಲ್ಲಿನ ಸಲಬತ್ಪುರ ನಿವಾಸಿಯಾದ ಉವೇಶ್ ಶೇಖ್ ಎಂಬಾತ ಮಲಗಿದ್ದಾಗ ತನ್ನ ಎಂಟು ತಿಂಗಳ ಮಗು ಅಳುತ್ತಿತ್ತು. ಈ ವೇಳೆ ಮಗುವನ್ನು ಆತ ಕೊಂದಿದ್ದಾನೆ. ಈಗ ಸಲಬತ್ಪುರ ಪೊಲೀಸರು ವ್ಯಕ್ತಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಮಗುವಿನ ಮೃತದೇಹವನ್ನು ಈಗ ಮರಣೋತ್ತರ ಪರೀಕ್ಷೆಗಾಗಿ ಸ್ಮೀರ್ ಆಸ್ಪತ್ರೆಗೆ ರವಾನಿಸಲಾಗಿದೆ.ಕುಟುಂಬದವರಲ್ಲಿ ದುಃಖ ಮಡುಗಟ್ಟಿದೆ.