ಕರ್ನಾಟಕ

karnataka

ETV Bharat / bharat

ಮಗಳ ಚಿಕಿತ್ಸೆಗೆ ಹಣವಿಲ್ಲ ಎಂಬ ಕಾರಣಕ್ಕೆ  ಕೊಲೆ ಮಾಡಿದ ಪಾಪಿ! - ತೆಲಂಗಾಣದ ಕರೀಂನಗರ

ಅನಾರೋಗ್ಯದಿಂದ ಬಳಲುತ್ತಿದ್ದ ಮಗಳ ಚಿಕಿತ್ಸೆ ಹಾಗೂ ಮದುವೆ ಮಾಡಲು ಹಣವಿಲ್ಲ ಎಂದು ಆಕೆಯನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಕರೀಂನಗರದಲ್ಲಿ ನಡೆದಿದೆ.

Father kills daughter
Father kills daughter

By

Published : Mar 3, 2020, 8:25 AM IST

ಕರೀಂನಗರ(ತೆಲಂಗಾಣ): ಮಗಳ ಚಿಕಿತ್ಸೆಗಾಗಿ ಹಣವಿಲ್ಲ ಎಂದು ಆಕೆಯನ್ನ ಬರ್ಬರವಾಗಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ಕರೀಂನಗರದಲ್ಲಿನ ವಿದ್ಯಾನಗರದಲ್ಲಿ ನಡೆದಿದೆ.

ಪ್ರಥಮ ವರ್ಷದ ಪಿಯು ಓದುತ್ತಿದ್ದ 19 ವರ್ಷದ ವಿದ್ಯಾರ್ಥಿನಿ ರಾಧಿಕಾ ಮೇಲಿಂದ ಮೇಲೆ ಅನಾರೋಗ್ಯದಿಂದ ಬಳಲುತ್ತಿದ್ದಳು. ಹೀಗಾಗಿ ಅವರ ತಂದೆ 6 ಲಕ್ಷ ರೂ. ಹಾಗೂ 30 ಗ್ರಾಂ ಚಿನ್ನವನ್ನೂ ಮಾರಾಟ ಮಾಡಿ ಹಣ ಅದರಿಂದ ಬಂದ ಹಣದಿಂದ ಮಗಳಿಗೆ ಚಿಕಿತ್ಸೆ ಕೊಡಿಸಿದ್ದರು. ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಆತನ ಬಳಿ ಹಣ ಇಲ್ಲದಿರುವುದು ಹಾಗೂ ಮದುವೆ ಮಾಡಿಕೊಡಲು ತನ್ನ ಬಳಿ ಸಾಮರ್ಥ್ಯವಿಲ್ಲವೆಂದು ನಿರ್ಧರಿಸಿ ಈ ಕೃತ್ಯ ಕೈಗೊಂಡಿದ್ದಾನೆ ಎನ್ನಲಾಗಿದೆ.

ಮಗಳ ಚಿಕಿತ್ಸೆಗೆ ಹಣವಿಲ್ಲವೆಂದು ಬರ್ಬರವಾಗಿ ಕೊಲೆ ಮಾಡಿದ ಪಾಪಿ ತಂದೆ!

ಕೃತ್ಯವೆಸಗಿದ್ದು ಹೇಗೆ!?

ಫೆ.10ರಂದು ಈ ಕೃತ್ಯವೆಸಗಿದ್ದು, ಪತ್ನಿ ಹಾಗೂ ಕೂಲಿ ಕೆಲಸದವಳನ್ನ ಮನೆಯಿಂದ ಹೊರಗಡೆ ಕಳುಹಿಸಿದ್ದಾನೆ. ಇದೇ ವೇಳೆ, ರೂಂನಲ್ಲಿ ಮಲಗಿದ್ದ ಮಗಳನ್ನ ಚಾಕುವಿನಿಂದ ಕೊಯ್ದು ಹತ್ಯೆ ಮಾಡಿದ್ದಾನೆ. ಇದಾದ ಬಳಿಕ ಯಾವುದೇ ರೀತಿಯ ಅನುಮಾನ ಬಾರದಂತೆ ಚೆಲ್ಲಾಪಿಲ್ಲಿಯಾಗಿದ್ದ ರಕ್ತವನ್ನ ಒರೆಸಿ, ಕೆಲಸಕ್ಕೆ ಹೋಗಿದ್ದಾನೆ.

ಸಂಜೆ ವೇಳೆಗೆ ಆತನ ಪತ್ನಿ ಮನೆಗೆ ಬಂದಾಗ ಅನುಮಾನ ಬಾರದಂತೆ ಮಾತನಾಡಿದ್ದಾನೆ. ಆದರೆ, ಪಕ್ಕದ ಮನೆಯವರಿಗೆ ಇದರ ಬಗ್ಗೆ ಸಂಶಯ ಬಂದು ಮಾಹಿತಿ ನೀಡಿದ್ದಾರೆ. ಆ ವೇಳೆ ಗಂಡನ ಬಳಿ ಇದರ ಬಗ್ಗೆ ಕೇಳುತ್ತಿದ್ದಂತೆ ಜೋರಾಗಿ ಅಳಲು ಶುರು ಮಾಡಿದ್ದು, ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾನೆ. ಮಗಳ ಚಿಕಿತ್ಸೆಗಾಗಿ ತನ್ನ ಬಳಿ ಹಣವಿಲ್ಲದ ವಿಚಾರವನ್ನ ಹೊರಹಾಕಿದ್ದಾನೆ. ಇದೀಗ ಆರೋಪಿಯ ಬಂಧನ ಮಾಡಿರುವ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಕಂಬಿ ಹಿಂದೆ ತಳ್ಳಿದ್ದಾರೆ.

ABOUT THE AUTHOR

...view details