ಕರ್ನಾಟಕ

karnataka

By

Published : Sep 4, 2020, 5:54 PM IST

ETV Bharat / bharat

ಪತ್ನಿ ಅಕ್ರಮ ಸಂಬಂಧ: 5 ವರ್ಷದ ಮಗಳ ಜೊತೆ ತಂದೆ ನೇಣಿಗೆ ಶರಣು... ವಿಡಿಯೋ ವೈರಲ್​!

ಐದು ವರ್ಷದ ಮಗಳೊಂದಿಗೆ ತಂದೆಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Father committed suicide
Father committed suicide

ಚಿತ್ತೂರು(ಆಂಧ್ರಪ್ರದೇಶ): ಕಟ್ಟಿಕೊಂಡ ಹೆಂಡತಿ ಬೇರೆ ವ್ಯಕ್ತಿ ಜತೆ ಅಕ್ರಮ ಸಂಬಂಧ ಹೊಂದಿದ್ದರಿಂದ ಮನನೊಂದ ವ್ಯಕ್ತಿಯೋರ್ವ ತನ್ನ ಮಗಳನ್ನು ನೇಣುಹಾಕಿ, ತದನಂತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರಿ​​ನಲ್ಲಿ ನಡೆದಿದೆ.

ಹೆಂಡತಿ ಅಕ್ರಮ ಸಂಬಂಧ: ನೇಣಿಗೆ ಶರಣಾದ ಗಂಡ

ಕೊರಿಯರ್​ ಡೆಲಿವರಿ ಬಾಯ್​ ಆಗಿ ಗಣೇಶ್​ ಕೆಲಸ ಮಾಡ್ತಿದ್ದನು. ನಿನ್ನೆ ರಾತ್ರಿ ಖಾಸಗಿ ಹೊಟೆಲ್​ ರೂಂನಲ್ಲಿ ಐದು ವರ್ಷದ ಮಗಳನ್ನ ಗಲ್ಲಿಗೇರಿಸಿದ ಬಳಿಕ ಆತನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವೇಳೆ ವಿಡಿಯೋ ಮಾಡಿರುವ ಆತ, ಹೆಂಡತಿ ಅಕ್ರಮ ಸಂಬಂಧದಿಂದ ಮನನೊಂದು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾನೆ.

ಗಣೇಶ್​ ಹೆಂಡತಿ ದಿವ್ಯಾ ಅಕ್ರಮ ಸಂಬಂಧ ಹೊಂದಿದ್ದಳಂತೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ಸಲ ಆತ ಪ್ರಶ್ನೆ ಮಾಡಿದ್ದನು. ಜತೆಗೆ ಪಂಚಾಯ್ತಿ ನಡೆಸಿ ಬುದ್ಧಿವಾದ ಹೇಳಿದ್ರೂ ಕೂಡ ಆಕೆ ತನ್ನ ವರಸೆ ಮುಂದುವರಿಸಿದ್ದಳು ಎಂದು ತಿಳಿಸಿದ್ದಾನೆ. ಜತೆಗೆ ತನ್ನ 5 ವರ್ಷದ ಮಗಳು ಕಾರ್ತಿಕಾ ಕೂಡ ದಿವ್ಯಾ ಬಾಯ್​ಫ್ರೆಂಡ್​​ನಿಂದ ಅನೇಕ ಸಲ ಲೈಂಗಿಕ ಕಿರುಕುಳಕ್ಕೊಳಗಾಗಿದ್ದಾಗಿ ಹೇಳಿದ್ದಾನೆ.

ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುಂಚಿತವಾಗಿ ಆತ ಮಾಡಿರುವ ವಿಡಿಯೋ ಗೆಳೆಯರ ಮೊಬೈಲ್​ಗೆ ಹರಿಬಿಟ್ಟಿದ್ದಾನೆ. ಇದಾದ ಬಳಿಕ ಆ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ. ಹೊಟೆಲ್​ ರೂಂನಿಂದ ಮೃತದೇಹ ವಶಪಡಿಸಿಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಅಸ್ಪತ್ರೆಗೆ ರವಾನೆ ಮಾಡಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details