ಕರ್ನೂಲ್(ಆಂಧ್ರಪ್ರದೇಶ): ಮಗ ತನ್ನಿಷ್ಟಕ್ಕೆ ವಿರುದ್ಧವಾಗಿ ಮದುವೆಯಾದ ಎಂದು ಕುಪಿತಗೊಂಡ ತಂದೆಯೊಬ್ಬ ಮಗನ ಮೇಲೆ ಹಲ್ಲೆ ನಡೆಸಲು ದುಷ್ಕರ್ಮಿಗಳಿಗೆ ಸುಪಾರಿ ನೀಡಿದ ಘಟನೆ ಆಂಧ್ರಪ್ರದೇಶದ ಕರ್ನೂಲ್ನಲ್ಲಿ ನಡೆದಿದೆ.
ಹೀಗೆ ಹಣ ಪಡೆದ ದುಷ್ಕರ್ಮಿಗಳು ಗ್ಯಾಂಗ್ ಯುವಕ ಮೇಲೆ ಕೆಲ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಡೆಸಿರುವ ತನಿಖೆಯಿಂದ ಮಹತ್ವದ ವಿಚಾರ ಬೆಳಕಿಗೆ ಬಂದಿದೆ.
ಹರ್ಷವರ್ಧನ್ (28) ನಿನ್ನೆ ಬೆಳಗ್ಗೆ ತಂದೆ ಜತೆ ವಾಕಿಂಗ್ ಹೋಗಿದ್ದಾನೆ. ಈ ವೇಳೆ ದಿಢೀರ್ ಆಗಿ ಆತನ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಆತನೊಂದಿಗೆ ತಂದೆ ಶ್ರೀನಿವಾಸ ಆಚಾರಿ ಸಹ ಇದ್ದರು. ಘಟನೆಯಿಂದ ಗಾಯಗೊಂಡಿರುವ ಹರ್ಷವರ್ಧನ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಹರ್ಷವರ್ಧನ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಏನಿದು ಘಟನೆ!?:
ಮೂರು ವರ್ಷಗಳ ಹಿಂದೆ ಹರ್ಷವರ್ಧನ್ ತನ್ನ ತಾಯಿಯ ಚಿಕ್ಕಮ್ಮನ ಮಗಳನ್ನು ಕುಟುಂಬ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಾನೆ. ಇದಾದ ಬಳಿಕ ದಂಪತಿ ಕರ್ನಾಟಕದ ಕಲಬುರಗಿಯಲ್ಲಿ ವಾಸವಾಗಿದ್ದರು. ಇದರಿಂದ ಶ್ರೀನಿವಾಸ ಆಚಾರಿ ಅವಮಾನಕ್ಕೊಳಗಾಗಿದ್ದಾರೆ. ಹೀಗಾಗಿ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಮನೆಗೆ ಬರುವಂತೆ ಕಳೆದ ಕೆಲ ದಿನಗಳ ಹಿಂದೆ ಮಗನನ್ನು ಕರೆಯಿಸಿಕೊಂಡು ಈ ಕೃತ್ಯ ಎಸಗಿದ್ದಾರೆ.