ಕೇರಳ/ವೈನಾಡು:ಖಾಸಗಿ ಬಸ್‌ನಿಂದ ತಂದೆ, ಮಗಳು ತಳ್ಳಲ್ಪಟ್ಟು ಗಾಯಗೊಂಡಿರುವ ಘಟನೆ ಕೇರಳದ ವೈನಾಡುವಿನ ಮೀನಂಗಡಿ ಬಳಿ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ತಂದೆ-ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಖಾಸಗಿ ಬಸ್‌ನಿಂದ ತಂದೆ-ಮಗಳನ್ನು ಹೊರದಬ್ಬಿದ ಕಂಡಕ್ಟರ್! - ವೈನಾಡು ಖಾಸಗಿ ಬಸ್ ಕಂಡಕ್ಟರ್ ದರ್ಪ ಸುದ್ದಿ
ಖಾಸಗಿ ಬಸ್ ಕಂಡಕ್ಟರ್‌ವೊಬ್ಬ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ತಂದೆ, ಮಗಳನ್ನು ಹೊರಗೆ ತಳ್ಳಿದ ಘಟನೆ ಕೇರಳದ ವೈನಾಡುವಿನ ಮೀನಂಗಡಿ ಬಳಿ ನಡೆದಿದೆ.
ಗಾಯಾಳುಗಳನ್ನು ಕರಿಯಂಬಾಡಿ ನಿವಾಸಿ ಜೋಸೆಫ್ ಮತ್ತು ಅವರ ಮಗಳು ನೀತು ಎಂದು ಗುರುತಿಸಲಾಗಿದೆ. ಇಬ್ಬರು ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ರು. ಬಸ್ ನಿಲ್ಲಿಸಿದ ನಂತರ ನೀತು ತಂದೆ ಜೋಸೆಫ್ ಮೊದಲು ಬಸ್‌ನಿಂದ ಇಳಿದಿದ್ದಾರೆ. ಆದರೆ ನೀತು ಬಸ್‌ನಿಂದ ಇಳಿಯುವ ಮೊದಲೇ ಬಸ್ ಮುಂದೆ ಚಲಿಸಿದೆ. ಈ ವೇಳೆ ನೀತುಗೆ ಗಾಯಗಳಾಗಿವೆ. ಇದನ್ನು ಪ್ರಶ್ನಿಸಲು ತಂದೆ ಜೋಸೆಫ್ ಮತ್ತೆ ಬಸ್ ಹತ್ತಿದ್ದಾರೆ. ಈ ವೇಳೆ ಕಂಡಕ್ಟರ್ ಜೋಸೆಫ್ರ ತೋಳು ಹಿಡಿದು ಬಸ್‌ನಿಂದ ಆಚೆ ದೂಡಿದ್ದಾನೆ. ಈ ವೇಳೆ ಬಸ್‌ನಿಂದ ಕೆಳಗೆ ಬಿದ್ದ ಜೋಸೆಫ್ ಕಾಲುಗಳ ಮೇಲೆ ಬಸ್ ಚಕ್ರಗಳು ಹರಿದಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ.
ನಂತರ ಬಸ್ ಡ್ರೈವರ್ ಹಾಗೂ ಕಂಡಕ್ಟರ್ಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದು, ಗಾಯಾಳು ತಂದೆ, ಮಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
TAGGED:
vainadu latest crime news