ನವದೆಹಲಿ:ಬಿಜೆಪಿ ಸರ್ಕಾರ ಪ್ರಾರಂಭಿಸಿರುವ ಬೆಳೆ ವಿಮಾ ಯೋಜನೆ ಪ್ರಕೃತಿಯ ಬದಲಾವಣೆಗಳ ವಿರುದ್ಧ ಕೃಷಿ ಅಪಾಯಗಳನ್ನು ತಗ್ಗಿಸುವ ಮೂಲಕ ಕೋಟ್ಯಂತರ ರೈತರಿಗೆ ಪ್ರಯೋಜನವನ್ನು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಿಎಂ ಫಸಲ್ ಭೀಮಾ ಯೋಜನೆಯಿಂದ ಕೋಟ್ಯಂತರ ರೈತರಿಗೆ ಪ್ರಯೋಜನವಾಗಿದೆ: ಮೋದಿ - ಪಿಎಂ ಫಸಲ್ ಭೀಮಾ ಯೋಜನೆ
ಯೋಜನೆ ವ್ಯಾಪ್ತಿಯನ್ನು ಹೆಚ್ಚಿಸಿದೆ. ಅಪಾಯವನ್ನು ತಗ್ಗಿಸಿದೆ ಮತ್ತು ಕೋಟ್ಯಂತರ ರೈತರಿಗೆ ಪ್ರಯೋಜನ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಿಎಂ ಮೋದಿ
ಈ ಕುರಿತು ಟ್ವೀಟ್ ಮಾಡಿರುವ ಅವರು, ಕಷ್ಟಪಟ್ಟು ದುಡಿಯುವ ರೈತರನ್ನು ಪ್ರಕೃತಿಯ ಬದಲಾವಣೆಗಳಿಂದ ರಕ್ಷಿಸುವ ಮಹತ್ವದ ಉಪಕ್ರಮ, ಪಿಎಂ ಫಸಲ್ ಭೀಮಾ ಯೋಜನೆ ಇಂದಿಗೆ 5 ವರ್ಷಗಳನ್ನು ಪೂರೈಸಿದೆ. ಯೋಜನೆ ವ್ಯಾಪ್ತಿಯನ್ನು ಹೆಚ್ಚಿಸಿದೆ. ಅಪಾಯವನ್ನು ತಗ್ಗಿಸಿದೆ ಮತ್ತು ಕೋಟ್ಯಂತರ ರೈತರಿಗೆ ಪ್ರಯೋಜನವನ್ನು ನೀಡಿದೆ. ಯೋಜನೆಯ ಎಲ್ಲಾ ಫಲಾನುಭವಿಗಳನ್ನು ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ.
ಪಿಎಂ-ಎಫ್‌ಬಿವೈಗೆ ಸಂಬಂಧಿಸಿದ ಇತರ ಅಂಶಗಳಿಗೆ ನಮೋ ಅಪ್ಲಿಕೇಶನ್‌ನ ನಿಮ್ಮ ಧ್ವನಿ ವಿಭಾಗದಲ್ಲಿನ ನವೀನ ವಿಷಯದ ಮೂಲಕ ಉತ್ತರಿಸಲಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.