ಶ್ರೀನಗರ (ಜಮ್ಮು ಕಾಶ್ಮೀರ): ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರನ್ನು ತಮ್ಮ ಮನೆಯಿಂದ ಹೊರಗೆ ಬರದಂತೆ ಸರ್ಕಾರ ತಡೆದಿದ್ದು, ಇದರಿಂದಾಗಿ ಅವರು ಈದ್ ಮಿಲಾದ್ ವೇಳೆ ಹಜ್ರತ್ಬಲ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲು ಅಡ್ಡಿಯಾಗಿದೆ ಎಂದು ಪಕ್ಷ ಆರೋಪಿಸಿದೆ.
ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಈ ಕುರಿತು ಟ್ವಿಟರ್ನಲ್ಲಿ ಬರೆದುಕೊಂಡಿದ್ದು, ''ಜಮ್ಮು ಕಾಶ್ಮೀರ ಪ್ರಾಧಿಕಾರಗಳು ಪಕ್ಷದ ನಾಯಕ ಫಾರೂಕ್ ಅಬ್ದುಲ್ಲಾ ಅವರನ್ನು ಮನೆಯಲ್ಲಿರುವಂತೆ ನಿರ್ಬಂಧಿಸಿದ್ದು, ಅವರು ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ'' ಎಂದು ಆರೋಪಿಸಿದೆ.