ಕರ್ನಾಟಕ

karnataka

By

Published : Jul 16, 2020, 4:12 PM IST

ETV Bharat / bharat

ರೈತನ ಮಗನ ಸಾಧನೆ: CBSE ಪರೀಕ್ಷೆಯಲ್ಲಿ ಶೇ. 98.2ರಷ್ಟು ಅಂಕ, ಅಮೆರಿಕದಲ್ಲಿ ಅಧ್ಯಯನಕ್ಕೆ ಅರ್ಹತೆ

ಸಾಧನೆ ಮಾಡಬೇಕು ಎಂಬ ಗುರಿಯನ್ನಿಟ್ಟುಕೊಂಡು ವಿದ್ಯಾಭ್ಯಾಸ ಮಾಡದರೆ ಪ್ರತಿಫಲ ಸಿಗುತ್ತದೆ ಎಂಬುದಕ್ಕೆ ಈ ವಿದ್ಯಾರ್ಥಿ ಪ್ರತ್ಯಕ್ಷ ಉದಾಹರಣೆ. ಕಷ್ಟಪಟ್ಟು ಓದಿರುವ ಕಾರಣ ಇದೀಗ ಅಮೆರಿಕದ ವಿವಿಯಲ್ಲಿ ವ್ಯಾಸಂಗ ಮಾಡುವ ಅವಕಾಶ ಗಿಟ್ಟಿಸಿಕೊಂಡಿದ್ದಾನೆ.

Uttar Pradesh set to join Cornell University
Uttar Pradesh set to join Cornell University

ಲಖೀಂಪುರ್‌ಖೇರಿ (ಉತ್ತರಪ್ರದೇಶ):ಕಳೆದ ಎರಡು ದಿನಗಳ ಹಿಂದೆ ಸಿಬಿಎಸ್​ಇ 12ನೇ ತರಗತಿ ಫಲಿತಾಂಶ ಹೊರಬಿದ್ದಿದ್ದು, ಅನೇಕ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿ ಮೆಚ್ಚುಗೆ ಗಳಿಸಿದ್ದಾರೆ.

ಉತ್ತರ ಪ್ರದೇಶದ ಲಖೀಂಪುರ್‌ಖೇರಿ ಜಿಲ್ಲೆಯ ಸರಸಾನ್​ ಹಳ್ಳಿಯ ರೈತನ ಮಗ ಅನುರಾಗ್‌ ತಿವಾರಿ ಪರೀಕ್ಷೆಯಲ್ಲಿ ಶೇ. 98.02ರಷ್ಟು ಫಲಿತಾಂಶ ಪಡೆದುಕೊಂಡಿದ್ದು, ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಅವಕಾಶ ಪಡೆದುಕೊಂಡಿದ್ದಾನೆ.

ಅಮೆರಿಕದ ಕೊರೊನಿಲ್​​ ವಿವಿಯಲ್ಲಿ ವಿದ್ಯಾಭ್ಯಾಸ ಮಾಡುವ ಅವಕಾಶ ಪಡೆದ ವಿದ್ಯಾರ್ಥಿ, ಸಂಪೂರ್ಣ ವಿದ್ಯಾರ್ಥಿವೇತನವನ್ನೂ ಪಡೆದುಕೊಂಡಿದ್ದು, ಅರ್ಥಶಾಸ್ತ್ರ ವಿಷಯದಲ್ಲಿ ಮುಂದಿನ ವ್ಯಾಸಂಗ ಕೈಗೊಳ್ಳಲಿದ್ದಾನೆ.

18 ವರ್ಷದ ಅನುರಾಗ್​​ ಸಿಬಿಎಸ್​​ಇ 12ನೇ ತರಗತಿ ಪರೀಕ್ಷೆಯ ಗಣಿತ ವಿಷಯದಲ್ಲಿ 95, ಇಂಗ್ಲಿಷ್​ನಲ್ಲಿ 97, ರಾಜ್ಯಶಾಸ್ತ್ರ 99, ಇತಿಹಾಸ ಮತ್ತು ಅರ್ಥಶಾಸ್ತ್ರದಲ್ಲಿ 100 ಅಂಕ ಪಡೆದುಕೊಂಡಿದ್ದಾನೆ. ಇದರ ಜೊತೆಗೆ ಸ್ಕಾಲರ್‌ಶಿಪ್‌ ಅಸೆಸ್‌ಮೆಂಟ್‌ ಪರೀಕ್ಷೆ (ಎಸ್‌ಎಟಿ)ಯಲ್ಲಿ 1,370 ಅಂಕ ಗಳಿಸಿದ್ದಾನೆ.

ಹಣಕಾಸಿನ ತೊಂದರೆಯ ನಡುವೆಯೂ ಕೂಡ ಅನುರಾಗ್ ಅದ್ಭುತ ಸಾಧನೆ ತೋರಿದ್ದಾನೆ. ಉನ್ನತ ಶಿಕ್ಷಣದ ಸಲುವಾಗಿ ದೂರದೂರಿಗೆ ಹೋದರೆ ವಾಪಸ್​ ಬರುವುದಿಲ್ಲ ಎಂಬುದು ತಂದೆಯ ಚಿಂತೆಯಾಗಿದೆ.

ABOUT THE AUTHOR

...view details