ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಗಳಲ್ಲಿ ರೈತರು ಕೈಗೊಂಡಿರುವ ಪ್ರತಿಭಟನೆ ಇಂದು 29ನೇ ದಿನಕ್ಕೆ ಕಾಲಿಟ್ಟಿದೆ. ನ. 26 ರಿಂದಲೂ ಪ್ರತಿಭಟನೆ ನಡೆಯುತ್ತಿದ್ದು, ಕೃಷಿ ಕಾಯ್ದೆಗಳ ರದ್ದತಿಗೆ ರೈತರು ಪಟ್ಟು ಹಿಡಿದಿದ್ದಾರೆ.
ನಿನ್ನೆ ದೆಹಲಿ-ಸಿಂಘು ಗಡಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿದ ರೈತ ಸಂಘಗಳು, ಈಗಾಗಲೇ ತಿರಸ್ಕರಿಸಲ್ಪಟ್ಟ ಹೊಸ ಕೃಷಿ ಕಾನೂನುಗಳಿಗೆ ತಿದ್ದುಪಡಿ ಮಾಡುವ ಭರವಸೆಯನ್ನು ಪುನರಾವರ್ತಿಸಬಾರದು. ಈ ಕುರಿತು ಹೆಚ್ಚಿನ ಸುತ್ತಿನಲ್ಲಿ ಮಾತುಕತೆಗಳನ್ನು ನಡೆಸಿ ದೃಢವಾದ ಪ್ರಸ್ತಾವನೆಯನ್ನು ತರಬೇಕು. ಕೃಷಿ ಕಾನೂನುಗಳನ್ನು ತಿದ್ದುಪಡಿ ಮಾಡುವ ಪ್ರಸ್ತಾಪವನ್ನು ಈಗಾಗಲೇ ತಿರಸ್ಕರಿಸಿದ್ದೇವೆ. ಸರ್ಕಾರವು ಮುಕ್ತ ಮನಸ್ಸಿನಿಂದ ನಮ್ಮ ಬಳಿಗೆ ಬರುವ ವರೆಗೆ ಕಾಯುತ್ತಿದ್ದೇವೆ. ಕೇಂದ್ರವುಸ್ಪಷ್ಟ ಪ್ರಸ್ತಾವನೆಯನ್ನು ಮಂಡಿಸಿದರೆ ಮಾತುಕತೆಗೆ ಸಿದ್ಧ ಎಂದು ಹೋರಾಟಗಾರರು ತಿಳಿಸಿದ್ದಾರೆ.