ಕರ್ನಾಟಕ

karnataka

ETV Bharat / bharat

ಟಾರ್ಗೆಟ್​ ರಿಲಯನ್ಸ್‌.. ಅಂಬಾಲಾದಲ್ಲಿ ಶೋ ರೂಂ ಮುಂದೆ ರೈತರ ಬಹಿಷ್ಕಾರ - ರೈತರು ರಿಲಯನ್ಸ್ ಡಿಜಿಟಲ್ ಹೊರಗೆ ಬ್ಯಾನರ್‌ಗಳೊಂದಿಗೆ ಪ್ರದರ್ಶನ

ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದ್ದು, ಅದೇ ಸಮಯದಲ್ಲಿ, ಹರಿಯಾಣ ಹಾಗೂ ಪಂಜಾಬ್‌ನಲ್ಲಿ ರೈತರು ರಿಲಯನ್ಸ್‌ನ ಮಾಲ್‌ಗಳು ಮತ್ತು ಶೋ ರೂಂಗಳನ್ನು ಬಹಿಷ್ಕರಿಸಲು ಪ್ರಾರಂಭಿಸಿದ್ದಾರೆ.

farmers
ರೈತರ ಬಹಿಷ್ಕಾರ

By

Published : Jan 4, 2021, 12:49 PM IST

ಅಂಬಾಲಾ(ಹರಿಯಾಣ): ಮೂರು ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಹೋರಾಟದ ಮಧ್ಯೆ, ಹರಿಯಾಣ ರೈತರು ರಿಲಯನ್ಸ್‌ನ ಮಾಲ್‌ಗಳು ಹಾಗೂ ಶೋ ರೂಂಗಳ ಹೊರಗೆ ಭಿತ್ತಿ ಪತ್ರಗಳ ಪ್ರದರ್ಶನ ಮತ್ತು ರಿಲಯನ್ಸ್‌ ಬಹಿಷ್ಕಾರವನ್ನು ಪ್ರಾರಂಭಿಸಿದ್ದಾರೆ.

ಭಾನುವಾರ ತಡರಾತ್ರಿ ಅಂಬಾಲಾದಲ್ಲಿ, ರೈತರು ರಿಲಯನ್ಸ್ ಡಿಜಿಟಲ್ ಹೊರಗೆ ಬ್ಯಾನರ್‌ಗಳೊಂದಿಗೆ ಪ್ರದರ್ಶನ ನೀಡಿದಾಗ, ನೌಕರರು ಮಾಲ್​ ಮುಚ್ಚಿದರು. ಈ ಬಹಿಷ್ಕಾರ ಹೀಗೆ ಮುಂದುವರಿಯುತ್ತದೆ. ಅಲ್ಲದೇ ನಿತ್ಯ ರಿಲಯನ್ಸ್ ಹೊರಗೆ ಇದೇ ಪ್ರದರ್ಶನ ನೀಡಲಿದ್ದೇವೆ ಎಂದು ಪ್ರತಿಭಟಿಸುತ್ತಿದ್ದ ಯುವ ರೈತರು ಹೇಳಿದರು.

ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದ್ದು, ಅದೇ ಸಮಯದಲ್ಲಿ, ಹರಿಯಾಣ ಹಾಗೂ ಪಂಜಾಬ್‌ನಲ್ಲಿ ರೈತರು ರಿಲಯನ್ಸ್‌ನ ಮಾಲ್‌ಗಳು ಮತ್ತು ಶೋ ರೂಂಗಳನ್ನು ಬಹಿಷ್ಕರಿಸಲು ಪ್ರಾರಂಭಿಸಿದ್ದಾರೆ.

ಅಂಬಾಲಾ ನಗರದಲ್ಲಿ, ಯುವ ರೈತರು ರಿಲಯನ್ಸ್ ಬಹಿಷ್ಕಾರದ ಪೋಸ್ಟರ್‌ಗಳೊಂದಿಗೆ ರಿಲಯನ್ಸ್ ಡಿಜಿಟಲ್ ಹೊರಗೆ ಜಮಾಯಿಸಿದರು. ರೈತರು ಸೇರುತ್ತಿರುವುದನ್ನು ನೋಡಿ ರಿಲಯನ್ಸ್ ನೌಕರರು ಮಾಲ್ ಮುಚ್ಚಿದ್ದಾರೆ.

ABOUT THE AUTHOR

...view details