ನವದೆಹಲಿ: ಕೇಂದ್ರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕಳೆದ 21 ದಿನಂದ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಇದೇ ವಿಚಾರವಾಗಿ ಟ್ವಿಟ್ಟರ್‌ನಲ್ಲಿ ಶೀತಲ ಸಮರ ಶುರುವಾಗಿದೆ. ಅಂತಾರಾಷ್ಟ್ರೀಯ ಮಹಿಳಾ ಕುಸ್ತಿಪಟು ಸಹೋದರಿಯರಾದ ಬಬಿತಾ ಫೋಗಟ್ ಮತ್ತು ವಿನೇಶ್ ಫೋಗಟ್ ಟ್ವಿಟ್ಟರ್ ಕುಸ್ತಿ ನಡೆಸುತ್ತಿದ್ದಾರೆ.
ರೈತರ ಪ್ರತಿಭಟನೆ ವಿಚಾರದಲ್ಲಿ ಫೋಗಟ್ ಸಹೋದರಿಯರ ಕುಸ್ತಿ! - ಟ್ವಿಟ್ಟರ್‌ನಲ್ಲಿ ಫೋಗಟ್ ಸಹೋದರರಿಯರ ಫೈಟ್
ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಎಂದಿಗೂ ರೈತರಿಗೆ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಎಂದಿಗೂ ರೈತ ಸಹೋದರರ ಹಕ್ಕುಗಳನ್ನು ಸಾಯಲು ಬಿಡುವುದಿಲ್ಲ ಎಂದು ಕುಸ್ತಿ ಪಟು ಬಬಿತಾ ಫೋಗಟ್ ಟ್ವಿಟ್ ಮಾಡಿದ್ದಾರೆ. ಇದ್ಕಕೆ ತಿರುಗೇಟು ಎಂಬ ಈಕೆಯ ಸಹೋದರಿ ವಿನೇಶ್ ಫೋಗಟ್ ಕ್ರೀಡಾಪಟುಗಳು ಇಂತಹ ಕ್ಷುಲ್ಲಕ ಭಾಷೆಯನ್ನು ಬಳಸಬಾರದು ಎಂದಿದ್ದಾರೆ.
ರೈತ ಚಳವಳಿಗಳನ್ನು ತುಂಡು ತುಂಡಾಗಿ ಅಪಹರಿಸಲಾಗಿದೆ ಎಂದು ತೋರುತ್ತದೆ. ಎಲ್ಲಾ ರೈತ ಸಹೋದರರಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತೇನೆ ಎಲ್ಲರೂ ಮನೆಗೆ ಮರಳಿ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಎಂದಿಗೂ ರೈತ ಸಹೋದರರ ಹಕ್ಕುಗಳನ್ನು ಸಾಯಲು ಬಿಡುವುದಿಲ್ಲ. ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಎಂದಿಗೂ ರೈತರಿಗೆ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಬಬಿತಾ ಫೋಗಟ್ ಅವರ ಟ್ವೀಟ್‌ಗೆ ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕ್ರೀಡಾಪಟುಗಳು ಇಂತಹ ವಿವಾದಾತ್ಮಕ ಭಾಷೆ ಬಳಸಬಾರದು ಎಂದು ವಿನೇಶ್ ಪೋಗಟ್ ತಿರುಗೇಟು ನೀಡಿದ್ದಾರೆ.