ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರದಲ್ಲಿ ಕೇಂದ್ರ ಕೃಷಿ ಮಸೂದೆ ಜಾರಿ ಮಾಡಲ್ಲ: ಡಿಸಿಎಂ ಅಜಿತ್​ ಪವಾರ್​ - ಮಹಾರಾಷ್ಟ್ರದಲ್ಲಿ ಕೇಂದ್ರ ಕೃಷಿ ಮಸೂದೆ

ನೂತನ ಕೃಷಿ ಮಸೂದೆ ಮಹಾರಾಷ್ಟ್ರದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಅಜಿತ್​ ಪವಾರ್​ ಹೇಳಿಕೆ ನೀಡಿದ್ದಾರೆ.

Deputy CM Ajit Pawar
Deputy CM Ajit Pawar

By

Published : Sep 25, 2020, 4:20 PM IST

ಮುಂಬೈ:ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಕೃಷಿ ಮಸೂದೆಗಳಿಗೆ ಈಗಾಗಲೇ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಇಂದು ಭಾರತ್​ ಬಂದ್​ಗೆ ಕರೆ ನೀಡಲಾಗಿದೆ.

ಇದೇ ವಿಚಾರವಾಗಿ ಮಾತನಾಡಿರುವ ಉಪ ಮುಖ್ಯಮಂತ್ರಿ ಅಜಿತ್​ ಪವಾರ್,​​ ಮಹಾರಾಷ್ಟ್ರದಲ್ಲಿ ಈ ಮಸೂದೆಗಳು ಜಾರಿಗೊಳ್ಳುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಈ ಮಸೂದೆಗಳ ಕುರಿತು ಕಾನೂನು ಜಟಿಲತೆ, ಅಡೆ-ತಡೆ, ತೊಂದರೆ ಸೇರಿದಂತೆ ಲಾಭ-ನಷ್ಟದ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ. ಕೇಂದ್ರದಲ್ಲಿ ಈ ಮಸೂದೆಗಳು ತರಾತುರಿಯಲ್ಲಿ ಅಂಗೀಕಾರಗೊಂಡಿವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಕೃಷಿ ವಲಯಕ್ಕೆ ಸಂಬಂಧಿಸಿದ ಮೂರು ಮಹತ್ವದ ಮಸೂದೆಗಳಿಗೆ ಅನುಮೋದನೆ ಸಿಕ್ಕಿವೆ. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ವಿಧೇಯಕ-2020, ರೈತರ ಬೆಳೆಗೆ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ವಿಧೇಯಕ 2020 ಅಂಗೀಕಾರಗೊಂಡಿವೆ. ಇದರ ವಿರುದ್ಧ ದೇಶಾದ್ಯಂತ ಇಂದು ಪ್ರತಿಭಟನೆ ನಡೆಯುತ್ತಿದೆ.

ABOUT THE AUTHOR

...view details