ಕರ್ನಾಟಕ

karnataka

By

Published : Sep 27, 2020, 1:13 PM IST

ETV Bharat / bharat

ಕೃಷಿ ಕ್ಷೇತ್ರ, ನಮ್ಮ ರೈತರು, ನಮ್ಮ ಗ್ರಾಮಗಳು ಆತ್ಮನಿರ್ಭರ ಭಾರತದ ಅಡಿಪಾಯ: ಮನ್ ಕಿ ಬಾತ್​ನಲ್ಲಿ ಮೋದಿ ಹೇಳಿಕೆ​

'ಮನ್ ಕಿ ಬಾತ್' ಕಾರ್ಯಕ್ರಮದ 69ನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಕೃಷಿ ಕ್ಷೇತ್ರದ ಬಲಗೊಳ್ಳುವ ಮೂಲಕ ಅತ್ಮನಿರ್ಭರ ಭಾರತದ ಅಡಿಪಾಯ ಬಲವಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

modi mann ki baat
ಮನ್ ಕಿ ಬಾತ್​ನಲ್ಲಿ ಮೋದಿ ಹೇಳಿಕೆ​

ನವದೆಹಲಿ: ರೈತರು ಹಣ್ಣುಗಳು ಅಥವಾ ತರಕಾರಿಗಳನ್ನು ಮಾತ್ರವಲ್ಲದೆ ಅಕ್ಕಿ, ಗೋಧಿ, ಸಾಸಿವೆ, ಕಬ್ಬು ಸೇರಿದಂತೆ ಯಾವುದೇ ಬೆಳೆಯನ್ನು ಉತ್ತಮ ಬೆಲೆ ನೀಡುವ ಯಾರಿಗಾದರೂ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ಪಡೆದಿದ್ದಾರೆ ಎಂದು ಕೃಷಿ ಮಸೂದೆಯ ಲಾಭಗಳನ್ನು ಪ್ರಧಾನಿ ಮೋದಿ ಹೇಳಿದ್ದಾರೆ.

'ಮನ್ ಕಿ ಬಾತ್' ಕಾರ್ಯಕ್ರಮದ 69ನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ 3-4 ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ, ಹಣ್ಣುಗಳು ಮತ್ತು ತರಕಾರಿಗಳನ್ನು ಎಪಿಎಂಸಿಯ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಆದರೆ ಇದು ಬದಲಾಗಿದೆ ಎಂದಿದ್ದಾರೆ.

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ಕೃಷಿ ಕ್ಷೇತ್ರವು ಗಣನೀಯ ಸಾಮರ್ಥ್ಯ ಪ್ರದರ್ಶನ ಮಾಡಿತ್ತು. ನಮ್ಮ ಕೃಷಿ ಕ್ಷೇತ್ರ, ನಮ್ಮ ರೈತರು, ನಮ್ಮ ಗ್ರಾಮಗಳು ಆತ್ಮನಿರ್ಭರ ಭಾರತದ ಅಡಿಪಾಯ. ಅವರು ಬಲಶಾಲಿಗಳಾಗಿದ್ದರೆ, ಆತ್ಮನಿರ್ಭರ ಭಾರತದ ಅಡಿಪಾಯವೂ ಬಲವಾಗಿರುತ್ತದೆ ಎಂದಿದ್ದಾರೆ.

ಆತ್ಮ ಇರುವಲ್ಲಿ ಒಂದು ಕಥೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಆಧುನಿಕ ಕಥೆ ಹೇಳುವವರು ವಹಿಸಿರುವ ಪಾತ್ರವನ್ನು ಶ್ಲಾಘಿಸಿದ್ದಾರೆ. ದೇಶವು ಕಲೆಯ ಶ್ರೀಮಂತ ಸಂಪ್ರದಾಯವನ್ನು ಹೊಂದಿದೆ ಮತ್ತು ಈ ಪ್ರಕ್ರಿಯೆಯಲ್ಲಿ ಕೊಡುಗೆ ನೀಡುವ ಕೆಲವು ಜನರ ಬಗ್ಗೆ ಮೋದಿ ಮಾತನಾಡಿದರು.

'ಭಾರತದಲ್ಲಿ ಕಥೆ ಹೇಳುವ ಪ್ರವರ್ಧಮಾನವಿದೆ. 'ಹಿತೋಪದೇಶ' ಮತ್ತು 'ಪಂಚತಂತ್ರ' ಸಂಪ್ರದಾಯವನ್ನು ಹೊಂದಿರುವ ದೇಶದ ನಾಗರಿಕರು ಎಂದು ನಾವು ಹೆಮ್ಮೆಪಡುತ್ತೇವೆ. ಕಥೆಗಳಲ್ಲಿ, ಪ್ರಾಣಿಗಳು ಮತ್ತು ಪಕ್ಷಿಗಳ ಕಾಲ್ಪನಿಕ ಪ್ರಪಂಚವನ್ನು ರಚಿಸಲಾಗಿದೆ ಆದ್ದರಿಂದ ಬುದ್ಧಿವಂತಿಕೆ ಮತ್ತು ಬುದ್ಧಿಶಕ್ತಿಯ ಪದಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು' ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಕಥೆಗಳು ಜನಪ್ರಿಯತೆ ಗಳಿಸುತ್ತಿವೆ. ಅನೇಕರು ಕಥೆ ಹೇಳುವಿಕೆಯನ್ನು ದೇಶಾದ್ಯಂತ ಜನಪ್ರಿಯಗೊಳಿಸುತ್ತಿದ್ದಾರೆ. ಭಾರತವು ಕಥೆ ಹೇಳುವ ಅದ್ಭುತ ಸಂಪ್ರದಾಯವನ್ನು ಹೊಂದಿದೆ ಎಂದಿದ್ದಾರೆ.

ABOUT THE AUTHOR

...view details