ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ಅನ್ನದಾತನ ಪ್ರತಿಭಟನೆ: 50,000 ಕೋಟಿ ರೂ. ನಷ್ಟ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ಸುಮಾರು 50,000 ಕೋಟಿ ರೂ. ನಷ್ಟವಾಗಿದೆ ಎಂದು ಸಿಎಐಟಿ ಮಾಹಿತಿ ನೀಡಿದೆ.

ದೆಹಲಿಯಲ್ಲಿ ಅನ್ನದಾತನ ಪ್ರತಿಭಟನೆ
ದೆಹಲಿಯಲ್ಲಿ ಅನ್ನದಾತನ ಪ್ರತಿಭಟನೆ

By

Published : Jan 21, 2021, 9:40 PM IST

ನವದೆಹಲಿ:ರಾಷ್ಟ್ರರಾಜಧಾನಿ ಮತ್ತು ಎನ್‌ಸಿಆರ್‌ನಲ್ಲಿ ರೈತರು ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಸುಮಾರು 50,000 ಕೋಟಿ ರೂ. ನಷ್ಟವಾಗಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಗುರುವಾರ ತಿಳಿಸಿದೆ.

ಸಿಎಐಟಿನ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಖಂಡೇನ್‌ವಾಲಾ ಮಾತನಾಡಿ, ಕೃಷಿ ಕಾನೂನುಗಳ ಜಾರಿಯನ್ನು ಒಂದೂವರೆ ವರ್ಷಗಳ ಕಾಲ ಅಮಾನತಿನಲ್ಲಿಡುವ, ರೈತರನ್ನು ಒಳಗೊಂಡ ಸಮಿತಿಯನ್ನು ರಚಿಸುವ ಕೇಂದ್ರ ಸರ್ಕಾರದ ಹೊಸ ಪ್ರಸ್ತಾವವು ಸಾಕಷ್ಟು ಸಮರ್ಥನೀಯ ಮತ್ತು ಸಮಂಜಸವಾಗಿದೆ. ಇದು ಸಮಸ್ಯೆಯನ್ನು ಬಗೆಹರಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿದೆ. 'ಕೃಷಿಕ ಸಮುದಾಯ ಮತ್ತು ಕೃಷಿ ಉತ್ಪನ್ನ ವ್ಯವಹಾರದಲ್ಲಿ ತೊಡಗಿರುವವರ ಹಿತದೃಷ್ಟಿಯಿಂದ ಸರ್ಕಾರದ ಈ ಪ್ರಸ್ತಾವವನ್ನು ರೈತರು ಒಪ್ಪುವುದು ಒಳ್ಳೆಯದು. ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದು ಸೂಕ್ತ ಎಂದಿದ್ದಾರೆ.

ಓದಿ:ಆಂಧ್ರದಲ್ಲಿ ಮನೆ ಬಾಗಿಲಿಗೆ ರೇಷನ್: ಮೊಬೈಲ್ ವಿತರಣಾ ವಾಹನಗಳಿಗೆ ಚಾಲನೆ

ರೈತರು ಇನ್ನೂ ಸರ್ಕಾರದ ಪ್ರಸ್ತಾವನೆಯನ್ನು ಸ್ವೀಕರಿಸದಿದ್ದರೆ, ಅವರು ಪರಿಹಾರ ಕಂಡುಕೊಳ್ಳಲು ಆಸಕ್ತಿ ಹೊಂದಿಲ್ಲ ಎಂದು ನಿರ್ಣಯಿಸಲಾಗುತ್ತದೆ. ಅಲ್ಲದೇ ಕೆಲವು ಕೆಟ್ಟ ಶಕ್ತಿಗಳು ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ಹೇಳಿದರು.

"ನಾವು ಈ ವಿವಾದಾತ್ಮಕ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಹುಡುಕುತ್ತೇವೆ. ಎಲ್ಲಾ ಮಧ್ಯಸ್ಥಗಾರರ ನ್ಯಾಯಸಮ್ಮತ ಹಿತಾಸಕ್ತಿಯನ್ನು ರಕ್ಷಿಸಬೇಕಾಗಿದೆ" ಎಂದು ಅವರು ಹೇಳಿದರು.

ABOUT THE AUTHOR

...view details