ಕರ್ನಾಟಕ

karnataka

ETV Bharat / bharat

ಮುಂದಿನ ಕ್ರಿಯಾ ಯೋಜನೆ ಬಗ್ಗೆ ಚರ್ಚೆ: ಇಂದು ಪ್ರತಿಭಟನಾನಿರತ ರೈತರ ಸಭೆ - Farmers protest against farm law of central government

ಸರ್ಕಾರವು ದೃಢವಾದ ಪರಿಹಾರವನ್ನು ನೀಡುವವರೆಗೂ ನಾವು ಚರ್ಚೆಗೆ ಸಿದ್ಧರಿದ್ದೇವೆ. ಅವರ ಪತ್ರದಲ್ಲಿ ಹೊಸದೇನೂ ಇಲ್ಲ. ಹೊಸ ಕೃಷಿ ಕಾನೂನುಗಳನ್ನು ತಿದ್ದುಪಡಿ ಮಾಡುವ ಸರ್ಕಾರದ ಪ್ರಸ್ತಾವನೆಯನ್ನು ನಾವು ಈಗಾಗಲೇ ತಿರಸ್ಕರಿಸಿದ್ದೇವೆ. ಸದ್ಯ ಸರ್ಕಾರದ ಪತ್ರಕ್ಕೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬ ಬಗ್ಗೆ ನಾವು ಚರ್ಚಿಸುತ್ತಿದ್ದೇವೆ ಎಂದು ಮುಖಂಡರು ಹೇಳಿದ್ದಾರೆ.

ಇಂದು ಪ್ರತಿಭಟನಾ ನಿರತ ರೈತರ ಸಭೆ ಸಾಧ್ಯತೆ
ಇಂದು ಪ್ರತಿಭಟನಾ ನಿರತ ರೈತರ ಸಭೆ ಸಾಧ್ಯತೆ

By

Published : Dec 22, 2020, 2:11 PM IST

ನವದೆಹಲಿ: ಮುಂದಿನ ಕ್ರಿಯಾ ಯೋಜನೆ ಕುರಿತು ಚರ್ಚಿಸಲು ಕೃಷಿ ಕಾನೂನು ವಿರೋಧಿಸಿ ಪ್ರತಿಭಟಿಸುತ್ತಿರುವ ನಡೆಸುತ್ತಿರುವ ರೈತರು ಇಂದು ಸಭೆ ಸೇರುವ ನಿರೀಕ್ಷೆಯಿದೆ ಎಂದು ಕ್ರಾಂತಿಕರಿ ಕಿಸಾನ್ ಯೂನಿಯನ್‌ನ ಗುರ್ಮೀತ್ ಸಿಂಗ್ ಹೇಳಿದ್ದಾರೆ.

ಹೊಸ ಕಾನೂನುಗಳನ್ನು ರದ್ದುಗೊಳಿಸುವಂತೆ ತುರ್ತು ಸಂಸತ್ತಿನ ಅಧಿವೇಶನವನ್ನು ಕೋರಿ ಶಿರೋಮಣಿ ಅಕಾಲಿ ದಳದೊಂದಿಗೆ ಪ್ರತಿಪಕ್ಷಗಳು ಸರ್ಕಾರದ ಮೇಲೆ ಒತ್ತಡ ಹೇರಿವೆ.

ಇದನ್ನೂ ಓದಿ:ಲಂಡನ್​ನಿಂದ ಚೆನ್ನೈಗೆ ಆಗಮಿಸಿದ ವ್ಯಕ್ತಿಗೆ ಕೊರೊನಾ

ಹೊಸ ಕೃಷಿ ಕಾನೂನುಗಳಿಗೆ ತಿದ್ದುಪಡಿ ಮಾಡುವ ಹಿಂದಿನ ಪ್ರಸ್ತಾವದ ಬಗ್ಗೆಯೇ ಮಾತುಕತೆ ನಡೆಸಲು ಸರ್ಕಾರ ಬಯಸಿದೆ. ತಿದ್ದುಪಡಿ ಬೇಡ, ಕಾಯ್ದೆಗಳನ್ನು ಸಂಪೂರ್ಣವಾಗಿ ವಾಪಸ್‌ ಪಡೆಯಬೇಕು. ಇದೇ ಉದ್ದೇಶಕ್ಕೆ ನಾವು ಸರ್ಕಾರದ ಜತೆ ಮಾತುಕತೆಗೆ ನಿರಾಕರಿಸಿದ್ದೆವು. ಸದ್ಯ ಸರ್ಕಾರದ ಪತ್ರಕ್ಕೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬ ಬಗ್ಗೆ ನಾವು ಚರ್ಚಿಸುತ್ತಿದ್ದೇವೆ ಎಂದು ಮುಖಂಡರು ಹೇಳಿದ್ದಾರೆ.

ABOUT THE AUTHOR

...view details