ಕೃಷ್ಣಗಿರಿ(ತಮಿಳುನಾಡು): ಪ್ರೀತಿಯಿಂದ ಸಾಕಿದ್ದ ತನ್ನ ಎತ್ತು ಸಾವನ್ನಪ್ಪಿದ್ದನ್ನು ಜೀರ್ಣಿಸಿಕೊಳ್ಳಲಾಗದ ರೈತನೋರ್ವ, ಒಂದು ಲಕ್ಷ ರೂ. ಖರ್ಚು ಮಾಡಿ ಎತ್ತಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಪ್ರೀತಿಯ ಎತ್ತು ಸಾವು.. 'ಕರಿಯನ್' ಅಂತ್ಯಕ್ರಿಯೆಗೆ 1 ಲಕ್ಷ ರೂ. ಖರ್ಚು ಮಾಡಿದ ರೈತ! - ತಮಿಳುನಾಡಿನ ಜಲ್ಲಿಕಟ್ಟು
ಮಗುವಿನಂತೆ ಸಾಕಿದ್ದ ಕರಿಯನ್ ಎಂಬ ಎತ್ತಿನ ಸಾವು ರೈತ ಚಿನ್ನಪ್ಪನಿಗೆ ಭಾರಿ ಆಘಾತವನ್ನುಂಟು ಮಾಡಿದೆ. ಹೀಗಾಗಿ ತನ್ನ ಎತ್ತಿಗೆ ಧಾರ್ಮಿಕ ವಿಧಿ ವಿಧಾನಗಳಂತೆ 1 ಲಕ್ಷ ರೂ. ಖರ್ಚು ಮಾಡಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಗ್ರಾಮಸ್ಥರು ಸಹ ಕರಿಯನ್ಗೆ ಅಂತಿಮ ಗೌರವ ಸಲ್ಲಿಸಿ ಬಳಿಕ ಸಮಾಧಿ ಮಾಡಿದರು.
![ಪ್ರೀತಿಯ ಎತ್ತು ಸಾವು.. 'ಕರಿಯನ್' ಅಂತ್ಯಕ್ರಿಯೆಗೆ 1 ಲಕ್ಷ ರೂ. ಖರ್ಚು ಮಾಡಿದ ರೈತ! bulls-funeral](https://etvbharatimages.akamaized.net/etvbharat/prod-images/768-512-9576661-367-9576661-1605671158890.jpg)
ಪ್ರೀತಿಯ ಎತ್ತು ಸಾವು
ಕೃಷ್ಣಗಿರಿ ಜಿಲ್ಲೆಯ ಹೊಸೂರಿನ ಪೂನಪಲ್ಲಿ ಗ್ರಾಮದ ಚಿನ್ನಪ್ಪ ಎಂಬ ರೈತ ಕೃಷಿಗಾಗಿ ಮತ್ತು ಜಲ್ಲಿಕಟ್ಟು ಸ್ಪರ್ಧೆಗೆಂದು ಕರಿಯನ್ ಎಂಬ ಎತ್ತನ್ನು ಖರೀದಿಸಿದ್ದರು. ಅದರಂತೆ ಕರಿಯನ್ ಈ ಹಿಂದೆ ನಾಲ್ಕು ಬಾರಿ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸಿ ಜಯ ಗಳಿಸಿತ್ತು.
ಹೀಗಾಗಿ ಈ ಎತ್ತನ್ನು ಮನೆಯ ಸದಸ್ಯನಂತೆ ರೈತ ಸಾಕಿದ್ದ. ಕರಿಯನ್ ಸಾವು ಚಿನ್ನಪ್ಪನಿಗೆ ಭಾರಿ ನೋವುಂಟುಮಾಡಿದೆ. ಹೀಗಾಗಿ ತನ್ನ ಎತ್ತಿಗೆ ಧಾರ್ಮಿಕ ವಿಧಿ ವಿಧಾನಗಳಂತೆ 1 ಲಕ್ಷ ರೂ. ಖರ್ಚು ಮಾಡಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಗ್ರಾಮಸ್ಥರು ಸಹ ಕರಿಯನ್ಗೆ ಅಂತಿಮ ನಮನ ಸಲ್ಲಿಸಿ ಬಳಿಕ ಸಮಾಧಿ ಮಾಡಿದರು.