ಕರ್ನಾಟಕ

karnataka

ETV Bharat / bharat

ಪುತ್ರರ ವಿರುದ್ಧ ಕೋಪ : ಪತ್ನಿ ಹಾಗೂ ನಾಯಿ ಹೆಸರಿಗೆ ಕೋಟ್ಯಂತರ ರೂ. ಆಸ್ತಿ ಬರೆದಿಟ್ಟ ರೈತ! - ಅರ್ಧ ಆಸ್ತಿಯನ್ನು ನಾಯಿಗೆ ನೀಡಿದ ರೈತ

ಬರಿ ಬಡಾ ನಿವಾಸಿ ಓಂ ವರ್ಮಾ ಅವರು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅವರಿಗೆ 18 ಎಕರೆ ಜಮೀನು ಇದೆ ಎಂದು ಹೇಳಲಾಗುತ್ತಿದೆ..

farmer of chhindwara wrote name of his dog in will
ತ್ನಿ ಹಾಗೂ ನಾಯಿ ಹೆಸರಿಗೆ ಕೋಟ್ಯಂತರ ರೂ. ಆಸ್ತಿ ಬರೆದಿಟ್ಟ ರೈತ

By

Published : Dec 30, 2020, 1:09 PM IST

ಛಿಂದ್ವಾರ(ಮಧ್ಯಪ್ರದೇಶ) :ನಾಯಿಯ ನಿಷ್ಠೆಗೆ ಮನಸೋತ ಮಾಲೀಕ ತನ್ನ ಆಸ್ತಿಯ ಅರ್ಧ ಭಾಗವನ್ನು ಸಾಕುನಾಯಿ ಹೆಸರಿಗೆ ವಿಲ್ ಬರೆದಿರುವ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಬರಿ ಬಡಾ ಗ್ರಾಮದ ನಿವಾಸಿ ಓಂ ನಾರಾಯಣ್ ಎಂಬುವರು ಇಂತಹ ಒಂದು ಅಪರೂಪದ ಪ್ರಸಂಗಕ್ಕೆ ಸಾಕ್ಷಿಯಾಗಿದ್ದಾರೆ. ತಮ್ಮ ನಾಯಿಯ ನಿಷ್ಠೆ ಉದಾಹರಿಸಿ ತಮಗಿದ್ದ ಅರ್ಧದಷ್ಟು ಆಸ್ತಿಯನ್ನು ನಾಯಿಯ ಹೆಸರಿಗೆ ಬರೆದಿದ್ದು, ಉಳಿದ ಅರ್ಧ ಆಸ್ತಿಯನ್ನು ಅವರ ಎರಡನೇ ಹೆಂಡತಿ ಚಂಪಾ ಎಂಬುವರ ಹೆಸರಿಗೆ ಬರೆದಿದ್ದಾರೆ. ತಮ್ಮ ಪುತ್ರರ ವರ್ತನೆಯಿಂದ ಕೋಪಗೊಂಡಿರುವ ಈ ತಮ್ಮ ಮಗನ ಬದಲು ಸಾಕು ನಾಯಿಯನ್ನು ತನ್ನ ಆಸ್ತಿಯ ಹಕ್ಕುದಾರನಾಗಿ ಮಾಡಿದ್ದಾರೆ.

ಪತ್ನಿ ಹಾಗೂ ನಾಯಿ ಹೆಸರಿಗೆ ಕೋಟ್ಯಂತರ ರೂ. ಆಸ್ತಿ ಬರೆದಿಟ್ಟ ರೈತ

ಓಂ ನಾರಾಯಣ್ ವರ್ಮಾ ತಮ್ಮ ವಿಲ್‌ನಲ್ಲಿರೋ ಬರೆದಿರೋದೇನೆಂದ್ರೇ, "ನನ್ನ ಹೆಂಡತಿ ಮತ್ತು ಸಾಕು ನಾಯಿ ನನಗೆ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಬ್ಬರೂ ನನಗೆ ಪ್ರಿಯವಾದವರು" ಎಂದು ಬರೆದಿದ್ದಾರೆ. "ನನ್ನ ಮರಣದ ನಂತರ ಹೆಂಡತಿ ಚಂಪಾ ವರ್ಮಾ ಮತ್ತು ಸಾಕು ನಾಯಿ ಜಾಕಿ ನನ್ನ ಪೂರ್ಣ ಆಸ್ತಿಗೆ ಅರ್ಹರಾಗಿರುತ್ತಾರೆ. ಅಲ್ಲದೆ, ನಾಯಿಗೆ ಸೇವೆ ಸಲ್ಲಿಸುವ ವ್ಯಕ್ತಿಯನ್ನು ಆಸ್ತಿಯ ಮುಂದಿನ ಉತ್ತರಾಧಿಕಾರಿ ಎಂದು ಪರಿಗಣಿಸಲಾಗುತ್ತದೆ" ಎಂದು ಬರೆದಿದ್ದಾರೆ.

ಓಂ ನಾರಾಯಣ್ ವರ್ಮಾ ತಮ್ಮ ಆಸ್ತಿಯ ಅರ್ಧದಷ್ಟು ಭಾಗವನ್ನು ಜಾಕಿಗೆ ನೀಡಲು ಕಾರಣವನ್ನು ನೀಡಿದ್ದಾರೆ. ವಿಲ್ ಪ್ರಕಾರ, "ಅವರನ್ನು ಪತ್ನಿ ಚಂಪಾ ನೋಡಿಕೊಳ್ಳುತ್ತಿದ್ದಾರೆ. ಆದ್ದರಿಂದ, ಆಸ್ತಿಯ ಅರ್ಧದಷ್ಟು ಹಣವನ್ನು ಚಂಪಾಗೆ ನೀಡಲಾಗಿದೆ. ಆದರೆ, 11 ತಿಂಗಳ ಜಾಕಿ ಯಾವಾಗಲೂ ಪತ್ನಿಯೊಂದಿಗೆ ಇರುತ್ತದೆ ಮತ್ತು ಕಾಳಜಿ ವಹಿಸುತ್ತದೆ. ಈ ಕಾರಣದಿಂದಾಗಿ ಆಸ್ತಿಯ ಮತ್ತೊಂದು ಭಾಗವನ್ನು ಜಾಕಿಗೆ ವರ್ಗಾಯಿಸಲಾಗಿದೆ".

ಯಾರು ಜಾಕಿಯೊಂದಿಗೆ ಉಳಿದು ಅದನ್ನು ನೋಡಿಕೊಳ್ಳುತ್ತಾರೋ ಅವರು ಆಸ್ತಿಯ ಮುಂದಿನ ಉತ್ತರಾಧಿಕಾರಿ ಎಂದು ಘೋಷಿಸಲಾಗುತ್ತದೆ. ಬರಿ ಬಡಾ ನಿವಾಸಿ ಓಂ ವರ್ಮಾ ಅವರು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅವರಿಗೆ 18 ಎಕರೆ ಜಮೀನು ಇದೆ ಎಂದು ಹೇಳಲಾಗುತ್ತಿದೆ. ಅವರ ನಾಯಿ ಮತ್ತು 2ನೇ ಹೆಂಡತಿ ಹೆಸರಿಗೆ ಈ ಆಸ್ತಿಯನ್ನು ಬರೆದಿಡಲಾಗಿದೆ.

ABOUT THE AUTHOR

...view details