ಕರ್ನಾಟಕ

karnataka

By

Published : Feb 6, 2021, 7:38 AM IST

Updated : Feb 6, 2021, 2:31 PM IST

ETV Bharat / bharat

ಕೃಷಿ ಕಾಯ್ದೆ ವಿರೋಧಿಸಿ 'ಚಕ್ಕಾ ಜಾಮ್': ಭಾರೀ ಪೊಲೀಸ್​ ಭದ್ರತೆ, ಹೆದ್ದಾರಿ ಬಂದ್ ಮಾಡಿ ರೈತರ ಪ್ರೊಟೆಸ್ಟ್​​

farm laws protest
farm laws protest

12:09 February 06

ಕುರುಬೂರು ಶಾಂತ್​ ಕುಮಾರ್ ವಶಕ್ಕೆ ಪಡೆದ ಪೊಲೀಸರು

ಹೆದ್ದಾರಿ ತಡೆದು ಪ್ರತಿಭಟನೆ, ಕುರುಬೂರು ಶಾಂತಕುಮಾರ್​ ವಶಕ್ಕೆ ಪಡೆದುಕೊಂಡ ಪೊಲೀಸರು

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತ್​ಕುಮಾರ್​

ಬೆಂಗಳೂರು-ಮೈಸೂರು ಹೆದ್ದಾರಿ ತಡೆದ ಪ್ರತಿಭಟನೆ ನಡೆಸುತ್ತಿದ್ದ ರೈತರು

ಮೂರು ಗಂಟೆಗೂ ಅಧಿಕ ಕಾಲ ರಸ್ತೆ ತಡೆದು ಪ್ರತಿಭಟನೆ

ರಾಷ್ಟ್ರೀಯ ಹೆದ್ದಾರಿ 7 ಬಂದ್ ಮಾಡಲು ಮುಂದಾದ ರೈತರು, ಪೊಲೀಸರಿಂದ ವಶಕ್ಕೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ರಾಣಿ ಕ್ರಾಸ್​

ಚಿತ್ರದುರ್ಗದಲ್ಲೂ ರೈತರಿಂದ ಹೆದ್ದಾರಿ ತಡೆದು ಪ್ರತಿಭಟನೆ

12:07 February 06

ರೈತರ ಪ್ರತಿಭಟನೆ, ಜನರಿಗೆ ತೊಂದರೆ ಆಗದಂತೆ ಸೂಚನೆ: ಬೊಮ್ಮಾಯಿ

ರೈತರ ಪ್ರತಿಭಟನೆ, ಜನರಿಗೆ ತೊಂದರೆ ಆಗದಂತೆ ಸೂಚನೆ: ಬೊಮ್ಮಾಯಿ

ರೈತರಿಂದ ಹೆದ್ದಾರಿ ತಡೆ,ರಾಜ್ಯದ ಎಲ್ಲ ರೈತ ಸಂಘಟನೆಗಳಿಗೆ ಮನವಿ

ರೈತರಿಂದ ರಾಷ್ಟ್ರೀಯ ಹೆದ್ದಾರಿ ತಡೆ:ಹಿರೇಬಾಗೇವಾಡಿ ಟೋಲ್ ನಾಕಾ ಬಳಿ  ಬಿಗಿ ಪೊಲೀಸ್ ಭದ್ರತೆ

11:41 February 06

ಕೃಷಿ ಕಾಯ್ದೆ ವಿರೋಧಿಸಿ ಮಂಡ್ಯ, ಬೆಂಗಳೂರಿನಲ್ಲೂ ಹೆದ್ದಾರಿ ಬಂದ್​

ಕೃಷಿ ಕಾಯ್ದೆ ವಿರೋಧಿಸಿ ಮಂಡ್ಯದಲ್ಲೂ ರೈತರ ಪ್ರತಿಭಟನೆ

12 ಗಂಟೆಯಿಂದ 3ಗಂಟೆವರೆಗೆ ಹೆದ್ದಾರಿ ಬಂದ್​ ಮಾಡಲಿರುವ ರೈತ ಸಂಘಟನೆ

ಬೆಂಗಳೂರಿನಲ್ಲೂ ಹೆದ್ದಾರಿ ಬಂದ್ ಮಾಡಿ ರೈತರಿಂದ ಪ್ರತಿಭಟನೆ

ಬಿಡದಿ ಬಸ್​ ನಿಲ್ದಾಣದ ಬಳಿ ಸೇರಿದ ನೂರಾರು ರೈತರು, ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚನೆ

10:55 February 06

ದೆಹಲಿಯಲ್ಲಿ ಪೊಲೀಸ್ ಸರ್ಪಗಾವಲು

ಚಕ್ಕಾಜಾಮ್​ ಪ್ರತಿಭಟನೆ: ದೆಹಲಿಯ ಲಾಲ್​ ಕ್ವಿಲಾ, ಜಮಾ ಮಸೀದಿ, ಜನಪಥ್​ ಮತ್ತು ಕೇಂದ್ರ ಸಚಿವಾಲಯದ ನಿರ್ಗಮನ/ ಆಗಮನ ದ್ವಾರ ಬಂದ್​

ವಿಶ್ವವಿದ್ಯಾನಿಲಯಂ ಮೆಟ್ರೋ ಸ್ಟೇಷನ್​ ಬಂದ್​ ಮಾಡಿದ ಮೆಟ್ರೋ

ಮಂಡಿ ಹೌಸ್​, ಐಟಿಒ ಹಾಗೂ ದೆಹಲಿ ಗೇಟ್​ ಬಂದ್ ಮಾಡಿದ ದೆಹಲಿ ಪೊಲೀಸರು

10:32 February 06

ಟಿಕ್ರಿ ಬಾರ್ಡರ್ ಸೇರಿ ಪ್ರಮುಖ ಸ್ಥಳಗಳಲ್ಲಿ ಡ್ರೋನ್ ಕಣ್ಗಾವಲು

ದೆಹಲಿಯ ಟಿಕ್ರಿ ಬಾರ್ಡರ್ ಸೇರಿ ಪ್ರಮುಖ ಸ್ಥಳಗಳಲ್ಲಿ ಡ್ರೋನ್ ಕಣ್ಗಾವಲು

ಚಕ್ಕಾ ಜಾಮ್​ ಪ್ರತಿಭಟನೆ: ಕಾನೂನು ಉಲ್ಲಂಘಟನೆ ಮಾಡಿದರೆ ಕಠಿಣ ಕ್ರಮ ಎಂದ ಸರ್ಕಾರ

ಶಾಂತಿಯುತ ಪ್ರತಿಭಟನೆ ನಡೆಸುವಂತೆ  ರೈತರಿಗೆ ದೆಹಲಿ ಸರ್ಕಾರದಿಂದ ಸೂಚನೆ

09:49 February 06

ಕೃಷಿ ಕಾಯ್ದೆ ವಿರೋಧಿಸಿ ದಾವಣಗೆರೆಯಲ್ಲಿ ಕಿಸಾನ್​ ಕಾಂಗ್ರೆಸ್ ಸಂಘಟನೆಯಿಂದ ರಕ್ತ ಚಳವಳಿ

ದೇಶದ ಗಡಿಯಲ್ಲಿ ಕಟ್ಟೆಚ್ಚರ, ಪೊಲೀಸ್ ಭದ್ರತೆ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆ ರದ್ಧುಗೊಳಿಸುವಂತೆ ಕಿಸಾನ್ ಕಾಂಗ್ರೆಸ್ ಸಂಘಟನೆ ವತಿಯಿಂದ ರಕ್ತಪತ್ರ ಚಳುವಳಿ ನಡೆಯಿತು. ದಾವಣಗೆರೆ ನಗರದಲ್ಲಿರುವ ಪ್ರಧಾನ ಅಂಚೆ ಕಚೇರಿ ಮುಂಭಾಗ ಚಳವಳಿ ನಡೆಸಲಾಯಿತು. ಜಿಲ್ಲಾಧ್ಯಕ್ಷ ಶಿವಗಂಗಾ ಬಸವರಾಜ್​ ನೇತೃತ್ವದಲ್ಲಿ ರಕ್ತ ಪತ್ರ ಚಳುವಳಿ ನಡೆಸಲಾಯಿತು. 

ಮೈಸೂರಿನಲ್ಲಿ ರೈಸ್ತೆ ತಡೆಗೆ ಭರ್ಜರಿ ಸಿದ್ಧತೆ, ಮೂರು ಕಡೆ ಹೆದ್ದಾರಿ ಬಂದ್​

ಎತ್ತಿನ ಗಾಡಿ ಮೂಲಕ ರಸ್ತೆ ತಡೆಗೆ ಮುಂದಾದ ಅನ್ನದಾತರು

09:08 February 06

ರೈತರ ಪ್ರತಿಭಟನೆ ತಡೆಯಲು ಪೊಲೀಸರಿಂದ ಕಟ್ಟೆಚ್ಚೆರ, ರಸ್ತೆಗಳಲ್ಲಿ ಬ್ಯಾರಿಕೇಡ್

ಚಕ್ಕಾಜಾಮ್​ ಪ್ರತಿಭಟನೆಗೆ ಕಾಂಗ್ರೆಸ್​ನಿಂದ ಬೆಂಬಲ

ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್​ ಮಾಹಿತಿ

ರೈತರ ಪ್ರತಿಭಟನೆ ತಡೆಯಲು ಪೊಲೀಸರಿಂದ ಕಟ್ಟೆಚ್ಚೆರ, ರಸ್ತೆಗಳಲ್ಲಿ ಬ್ಯಾರಿಕೇಡ್

ಗಾಜಿಪುರ್, ಟಕ್ರಿ ಹಾಗೂ ಸಿಂಘು ಗಡಿಯಲ್ಲಿ ಪೊಲೀಸ್ ನಿಯೋಜನೆ, ಹೆಚ್ಚಿನ ಭದ್ರತೆ

50 ಸಾವಿರ ಪೊಲೀಸರ ನಿಯೋಜನೆ, 12 ಮೆಟ್ರೋ ಸ್ಟೇಷನ್​​ಗಳ ಮೇಲೆ ನಿಗಾ

07:55 February 06

ಚಿತ್ರದುರ್ಗದಲ್ಲಿ ಬಂದ್ ಆಗಲಿವೆ ರಾಷ್ಟ್ರೀಯ ಹೆದ್ದಾರಿ

ಕೋಡಿಹಳ್ಳಿ ಚಂದ್ರಶೇಖರ್ ಬಣ ಹಾಗೂ ಪುಟ್ಟಣ್ಣಯ್ಯ ಬಣಗಳಿಂದ ರಸ್ತೆ ತಡೆದು ಪ್ರತಿಭಟನೆ

ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕುಗಳಲ್ಲೂ ರಸ್ತೆ ತಡೆ  

ಚಿತ್ರದುರ್ಗ ನಗರದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪ್ರಗತಿ ಗ್ರಾಮೀಣ ಬ್ಯಾಂಕ್ ಬಳಿ ಮಧ್ಯಾಹ್ನ 12 ಗಂಟೆಗೆ ರಸ್ತೆ ತಡೆ

07:29 February 06

ರಾಜ್ಯದಲ್ಲೂ ರಸ್ತೆಗಿಳಿದು ಪ್ರತಿಭಟಿಸಲಿದ್ದಾರೆ ಅನ್ನದಾತರು

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ಇಂದು ಹೆದ್ದಾರಿ ತಡೆ ಹೋರಾಟಕ್ಕೆ ಮುಂದಾಗಿದ್ದಾರೆ.  

ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿರುವ ಕಿಸಾನ್​ ಮೋರ್ಚಾ ಹೆದ್ದಾರಿ ತಡೆಗೆ ಮುಂದಾಗಿದ್ದು, ಪ್ರಮುಖವಾಗಿ ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನದಲ್ಲಿ ಇದರ ಬಿಸಿ ಹೆಚ್ಚಿರಲಿದೆ. ಇನ್ನು ರಾಜ್ಯದಲ್ಲೂ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಲು ಕೃಷಿ ಸಂಘಟನೆಗಳು ಮುಂದಾಗಿವೆ. ಮಧ್ಯಾಹ್ನ 12ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ  ಪ್ರತಿಭಟನೆ ನಡೆಯಲಿದೆ. ಪ್ರಮುಖವಾಗಿ ಚಿತ್ರದುರ್ಗ, ಬೆಂಗಳೂರು, ದೊಡ್ಡಬಳ್ಳಾಪುರ, ಮೈಸೂರು, ರಾಯಚೂರಿನಲ್ಲಿ ಹೆಚ್ಚಿನ ಬಿಸಿ ಮುಟ್ಟುವ ಸಾಧ್ಯತೆ ಇದೆ.  

ಕುರುಬೂರು ಶಾಂತಕುಮಾರ್​ ನೇತೃತ್ವದಲ್ಲಿ ಹೋರಾಟ ನಡೆಯಲಿದ್ದು, ಎಲ್ಲ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ.

Last Updated : Feb 6, 2021, 2:31 PM IST

ABOUT THE AUTHOR

...view details