ಮುಂಬೈ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮನೆಯಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ ಕೇಶವ್ನನ್ನು ತಮ್ಮ ಮನೆಯ ಕುಕ್ ಆಗಿ ನೇಮಕ ಮಾಡಲಾಗಿದೆ ಎನ್ನುವ ಸುದ್ದಿಯನ್ನು ಬಾಲಿವುಡ್ ನಟ ಫರ್ಹಾನ್ ಅಖ್ತರ್ ತಳ್ಳಿಹಾಕಿದ್ದಾರೆ.
"ನಮ್ಮ ಮನೆಯಲ್ಲಿ ಕೇಶವ್ ಎಂಬ ವ್ಯಕ್ತಿ ಕೆಲಸ ಮಾಡುತ್ತಿಲ್ಲ. ಆಶ್ಚರ್ಯಕರವೆಂದರೆ ಸುಳ್ಳನ್ನು ಬಿಂಬಿಸುವ ನಕಲಿ ಮಾಧ್ಯಮ ಸುಳ್ಳನ್ನು ಸತ್ಯವನ್ನಾಗಿ ಮಾಡಲು ಹೊರಟಿದೆ. ದಯವಿಟ್ಟು ಈ ರೀತಿ ಮೋಸ ಹೋಗುವುದನ್ನು ನಿಲ್ಲಿಸಿ. ಒಬ್ಬ ವ್ಯಕ್ತಿ ಈ ವಿಷಯವನ್ನು ಟಿವಿಯಲ್ಲಿ ಕುಳಿತುಕೊಂಡು ಕಿರುಚಾಡುವುದರಿಂದ ಅದು ನಿಜವಾಗುವುದಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.