ನವದೆಹಲಿ: ಕಳದೆರಡು ದಿನಗಳಿಂದ ಅಬ್ಬರಿಸಿ ಬೊಬ್ಬಿರಿದು 10ಕ್ಕೂ ಹೆಚ್ಚು ಬಲಿ ಪಡೆದ ಫಣಿ ಚಂಡಮಾರುತ, ಸಾವಿರಾರು ಕೋಟಿ ನಷ್ಟವನ್ನುಂಟು ಮಾಡಿ ಜನಜೀವನದ ಮೇಲೆ ಬರೆ ಎಳೆದಿದೆ. ಈ ನಡುವೆ ಇಂದು ಫಣಿ ಅಬ್ಬರ ತಗ್ಗಲಿದ್ದು, ಈಶಾನ್ಯ ಕೋಲ್ಕತ್ತಾ ದತ್ತ ಮುನ್ನುಗ್ಗುತ್ತಿದ್ದು, 60 ಕಿ.ಮೀ ವೇಗದಲ್ಲಿ ಬೀಸುತ್ತಿದೆ.
ಸಂಜೆ ವೇಳೆಗೆ ಫಣಿ ಬಾಂಗ್ಲಾದೇಶವನ್ನ ಪ್ರವೇಶಿಸಲಿದೆ ಎಂದು ಕೇಂದ್ರೀಯ ಹವಾಮಾನ ಇಲಾಖೆ ಹೇಳಿದೆ. ಒಡಿಶಾದಲ್ಲಿ ಫಣಿ ಭಾರಿ ಹಾನಿಯನ್ನುಂಟು ಮಾಡಿರುವುದರಿಂದ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸಂತ್ರಸ್ಥರಿಗೆ ಕೇಂದ್ರದಿಂದ ಎಲ್ಲ ನೆರವು ನೀಡುವ ಭರವಸೆ ನೀಡಿದ್ದಾರೆ.