ಭುವನೇಶ್ವರ್(ಒಡಿಶಾ):ರಾಜ್ಯದಲ್ಲಿ ಫಣಿ ಚಂಡಮಾರುತದ ಆರ್ಭಟ ಜೋರಾಗಿದೆ. ಭೀಕರ ಚಂಡಮಾರುತವು ಒಡಿಶಾದಲ್ಲಿ ಒಟ್ಟು 64 ಜನರನ್ನು ಬಲಿ ತೆಗೆದುಕೊಂಡಿದೆ.
ರಕ್ಕಸ ಫಣಿ ಎಫೆಕ್ಟ್: ಒಡಿಶಾದಲ್ಲಿ ಏರುತ್ತಲೇ ಇದೆ ಸಾವಿನ ಸಂಖ್ಯೆ! - Odisha
ಒಡಿಶಾ ಕಡಲ ತೀರಕ್ಕೆ 'ಫಣಿ' ಚಂಡಮಾರುತ ಅಪ್ಪಳಿಸಿ ಅಲ್ಲೋಕಲ್ಲೋಲ ಸೃಷ್ಟಿಸಿದ್ದು ಗೊತ್ತಿದೆ. ಈ ರಕ್ಕಸ ಪ್ರಾಕೃತಿಕ ವಿಕೋಪಕ್ಕೆ ಅಲ್ಲಿನ ಜನತೆ ಅಕ್ಷರಶಃ ತತ್ತರಿಸಿದ್ದಾರೆ. ಪುರಿ, ಕಟಕ್ ಸೇರಿದಂತೆ ವಿವಿಧೆಡೆ ಒಟ್ಟು 64 ಮಂದಿ ಸಾವನ್ನಪ್ಪಿದ್ದಾರೆ.
ಒಡಿಶಾದಲ್ಲಿ 64 ಬಲಿ ಪಡೆದ ರಕ್ಕಸ ಫಣಿ ಚಂಡಮಾರುತ
ಫಣಿ ತನ್ನ ರೌದ್ರಾವತಾರ ತೋರಿಸಿ ಒಡಿಶಾದಲ್ಲಿ ಅಲ್ಲೋಕಲ್ಲೋಲ ಸೃಷ್ಟಿಸಿತ್ತು. ಫಣಿ ಪರಿಣಾಮ ಲಕ್ಷಾಂತರ ಪ್ರಾಣಿ ಪಕ್ಷಿಗಳು ಸಾವನ್ನಪ್ಪಿದ್ದವು. ಅದರಂತೆ ಜನಜೀವನ ಅಸ್ತವ್ಯಸ್ತವಾಗಿದೆ. ಫಣಿ ನಂತರವೂ ಅದರ ಪರಿಣಾಮದಿಂದಾಗಿ ಸಾವಿನ ಸಂಖ್ಯೆ ಏರುತ್ತಲೇ ಇದೆ. ಅಂತೆಯೇ ಪುರಿಯಲ್ಲಿ 39, ಕೇಂದ್ರಪುರಲ್ಲಿ 3, ಮಯಾರ್ಭಂಜ್ನಲ್ಲಿ 4, ರಾಜ್ಪುರ್ದಲ್ಲಿ 3, ಕಟಕ್ನಲ್ಲಿ 6, ಖೋರ್ಧಾದಲ್ಲಿ 9 ಜನರನ್ನು ಫಣಿ ಬಲಿ ಪಡೆದಿದೆ. ಈವರೆಗೆ ಒಟ್ಟು 64 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.