ಅಹಮದಾಬಾದ್ (ಗುಜರಾತ್): ಕೊರೊನಾ ಸೋಂಕಿನಿಂದಾಗಿ ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೇಶದ ಖ್ಯಾತ ಜ್ಯೋತಿಷಿ ಬೆಜನ್ ದಾರುವಾಲಾ ಅವರು ನಿಧನರಾಗಿದ್ದಾರೆ.
ಮೋದಿ ಗೆಲುವು, ರಾಜೀವ್ ಗಾಂಧಿ ಹತ್ಯೆ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿ ಕೊರೊನಾಗೆ ಬಲಿ! - ಕೊರೊನಾ ಸೋಂಕಿನಿಂದ ಬೆಜನ್ ದಾರುವಾಲಾ ನಿಧನ
ಪ್ರಧಾನಿ ಮೋದಿ ಗೆಲುವು, ರಾಜೀವ್ ಗಾಂಧಿ ಹತ್ಯೆ, ಭೋಪಾಲ್ ಅನಿಲ ದುರಂತ ಸೇರಿದಂತೆ ಅನೇಕ ಘಟನೆಗಳ ಬಗ್ಗೆ ಮೊದಲೇ ಸೂಚನೆ ಭವಿಷ್ಯ ನುಡಿದಿದ್ದ ಖ್ಯಾತ ಜ್ಯೋತಿಷಿಯನ್ನು ಕೊರೊನಾ ಬಲಿ ಪಡೆದಿದೆ.
ಪಾರ್ಸಿ ಧರ್ಮ ಅನುಸರಿಸುತ್ತಿದ್ದ ದಾರುವಾಲಾ, ಸ್ವಯಂ ಘೋಷಿತ ಗಣೇಶ ಭಕ್ತರಾಗಿದ್ದರು. ಅವರ ವೆಬ್‌ಸೈಟ್ ಪ್ರಕಾರ, ವೈದಿಕ ಮತ್ತು ಪಾಶ್ಚಾತ್ಯ ಜ್ಯೋತಿಷ್ಯ, ಐ-ಚಿಂಗ್, ಟ್ಯಾರೋಟ್, ಸಂಖ್ಯಾಶಾಸ್ತ್ರ, ಕಬಾಲಾ ಮತ್ತು ಹಸ್ತಸಾಮುದ್ರಿಕ ತತ್ವಗಳಲ್ಲಿ ಹೆಸರುವಾಸಿಯಾಗಿದ್ದರು.
ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಬೆಜನ್ ಚುನಾವಣೆಯಲ್ಲಿ ಪ್ರಧಾನಿ ಮೋದಿ ಗೆಲುವು, ರಾಜೀವ್ ಗಾಂಧಿ ಹತ್ಯೆ, ಭೋಪಾಲ್ ಅನಿಲ ದುರಂತ ಸೇರಿದಂತೆ ಅನೇಕ ಘಟನೆಗಳ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದರು. ಜ್ಯೋತಿಷಿ ಅವರ ಸಾವಿಗೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.