ಕರ್ನಾಟಕ

karnataka

ETV Bharat / bharat

ರಫೇಲ್​ ಯುದ್ದ ವಿಮಾನಕ್ಕೆ ನಾರಿ ಶಕ್ತಿ, ಮೊದಲ ಮಹಿಳಾ ಪೈಲಟ್​ ಆದ ಶಿವಾಂಗಿ... ಕುಟುಂಬಸ್ಥರ ಸಂತೋಷ! - ಶಿವಾಂಗಿ ಸಿಂಗ್‌ ರಫೇಲ್​ ಯುದ್ಧ ವಿಮಾನ

ವಾರಣಾಸಿ ಮೂಲದ ವಾಯುಪಡೆ ಲೆಫ್ಟಿನೆಂಟ್‌ ಶಿವಾಂಗಿ ಸಿಂಗ್‌ ರಫೇಲ್​ ಯುದ್ಧ ವಿಮಾನ ಚಲಾಯಿಸಿರುವ ಮೊದಲ ಫೈಲಟ್​ ಆಗಿ ಹೊರಹೊಮ್ಮಿದ್ದಾರೆ.

flight Lt Shivangi Singh
flight Lt Shivangi Singh

By

Published : Sep 24, 2020, 8:32 PM IST

ವಾರಣಾಸಿ:ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿರುವ ರಫೇಲ್​ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್​ ಆಗಿ ಶಿವಾಂಗಿ ಸಿಂಗ್​ ಆಯ್ಕೆಯಾಗಿದ್ದು, ಇದಕ್ಕೆ ಅವರ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ವಾರಣಾಸಿಯ ಫ್ಲೈಟ್​​ ಲೆಫ್ಟಿನೆಂಟ್​ ಶಿವಾಂಗಿ ಸೆ.10ರಂದು ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ಫೈಟರ್​ ಜೆಟ್​ ಚಲಾಯಿಸಿದ್ದು, ಈ ಮೂಲಕ ಫೈಟರ್​ ರಫೇಲ್​ ಚಲಾಯಿಸಿರುವ ಪ್ರಥಮ ಮಹಿಳಾ ಪೈಲಟ್​​​ ಆಗಿದ್ದಾರೆ.

ಶಿವಾಂಗಿ ತಾಯಿ ಸಂತೋಷದ ಮಾತು

ಇದೇ ವಿಚಾರವಾಗಿ ಈಟಿವಿ ಭಾರತ ಜತೆ ಶಿವಾಂಗಿ ಸಿಂಗ್​ ತಾಯಿ ಸೀಮಾ ಸಿಂಗ್​, ಮಗಳು ಯುದ್ಧ ವಿಮಾನ ಚಲಾಯಿಸುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ. ಆದರೆ ಸ್ವಲ್ಪ ಭಯವಿದೆ ಎಂದಿದ್ದಾರೆ. ಫೈಟರ್​ ಜೆಟ್​ ರಫೇಲ್​ ಸುಧಾರಿತ ಜೆಟ್​ ಆಗಿದೆ ಎಂದಿದ್ದಾರೆ. ಶಿವಾಂಗಿಯನ್ನ ನಾವು ಎಂದಿಗೂ ಹುಡುಗಿಯಂತೆ ಪರಿಗಣಿಸಿಲ್ಲ. ವಿದ್ಯಾಭ್ಯಾಸದ ವೇಳೆ ಕ್ರೀಡೆಯಲ್ಲಿ ಹೆಚ್ಚು ಉತ್ಸಾಹ ಹೊಂದಿದ್ದಳು ಎಂದಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಶಿವಾಂಗಿ ತಂದೆ ಸುಶೀಲ್​ ಸಿಂಗ್​, ಮಗಳ ಬೆಳವಣಿಗೆ ಬಗ್ಗೆ ತಮಗೆ ಖುಷಿ ಇದೆ ಎಂದಿದ್ದಾರೆ.

ವಾಯುಪಡೆಯ ಅತ್ಯಂತ ಹಳೆ ಯುದ್ಧ ವಿಮಾನ ಮಿಗ್​​-21 ಚಲಾಯಿಸುತ್ತಿದ್ದ ಶಿವಾಂಗಿ ಸದ್ಯ ವಾಯುಪಡೆಯ ಅತ್ಯಾಧುನಿಕ ಯುದ್ಧ ವಿಮಾನ ರಫೇಲ್​​ ಚಲಾಯಿಸಲಿದ್ದಾರೆ. ರಫೇಲ್​ ಯುದ್ಧ ವಿಮಾನ ಗಂಟೆಗೆ ಗರಿಷ್ಠ 750 ಕಿಲೋ ಮೀಟರ್​​ ವೇಗದಲ್ಲಿ ಹಾರಾಟ ನಡೆಸಬಲ್ಲದು.

ABOUT THE AUTHOR

...view details