ಕರ್ನಾಟಕ

karnataka

ETV Bharat / bharat

ಉದ್ಯಮಿ ಅಪಹರಿಸಿ 25 ಲಕ್ಷಕ್ಕೆ ಬೇಡಿಕೆ ಇಟ್ಟ ನಕಲಿ ಪೊಲೀಸ್​ ಹುಬ್ಬಳ್ಳಿಯಲ್ಲಿ ಸೆರೆ - ಕರ್ನಾಟಕದ ಹುಬ್ಬಳ್ಳಿಯ

ಆರೋಪಿ ಗುಜರಾತ್​​ನಲ್ಲಿರುವ ಕುರಿತು ಖಚಿತ ಮಾಹಿತಿ ಪಡೆದಿದ್ದ ತಂಡ ಆತನ ಬೆನ್ನು ಬಿದ್ದಿತ್ತು. ಆದರೆ ಇದರ ಸುಳಿವು ಪಡೆದಿದ್ದ ಖದೀಮ ಅಲ್ಲಿಂದ ಎಸ್ಕೇಪ್ ಆಗಿದ್ದ. ಅಲ್ಲಿಂದ ಸುಮಾರು 1 ಸಾವಿರ ಕಿ.ಮೀವರೆಗೂ ಬೆನ್ನು ಹತ್ತಿದ ಎಇಸಿ ತಂಡ ಕೊನೆಗೆ ಕರ್ನಾಟಕದ ಹುಬ್ಬಳ್ಳಿಯಲ್ಲಿ ಆತನನ್ನು ವಶಕ್ಕೆ ಪಡೆಯವಲ್ಲಿ ಯಶಸ್ವಿಯಾಗಿದೆ.

fake-police-officer Syam sundhar sharma
ನಕಲಿ ಪೊಲೀಸ್ ಅಧಿಕಾರಿ ಶ್ಯಾಮ್​ ಸುಂದರ್​​​​​ ಶರ್ಮಾ

By

Published : Oct 10, 2020, 2:09 PM IST

ಮುಂಬೈ: ಸೂರತ್​​​​ನ ಉದ್ಯಮಿಯೋರ್ವನನ್ನು ಅಪಹರಿಸಿ 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ನಕಲಿ ಪೊಲೀಸ್​​​ ಅಧಿಕಾರಿಯನ್ನು ಇಲ್ಲಿನ ಅಪರಾಧ ತಡೆ ವಿಭಾಗದ ತಂಡ ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿ ರಾಜಸ್ಥಾನ ಮೂಲದ ಶ್ಯಾಮ್​ ಸುಂದರ್​​​​​ ಶರ್ಮಾ (38) ಉದ್ಯಮಿಯೋರ್ವನಿಗೆ ಕಂದಾಯ ಇಲಾಖೆಯೊಂದಿಗಿನ ವ್ಯಾಜ್ಯವನ್ನು ಇತ್ಯರ್ಥಗೊಳಿಸುವುದಾಗಿ ಬಲೆಗೆ ಬೀಳಿಸಿಕೊಂಡಿದ್ದ. ಅಲ್ಲದೆ ನಾನು ಐಪಿಎಸ್ ಮುಗಿಸಿ ಪೊಲೀಸ್ ಅಧಿಕಾರಿಯಾಗಿ ಸೇವೆಯಲ್ಲಿರುವುದಾಗಿ ಉದ್ಯಮಿಗೆ ತಿಳಿಸಿದ್ದ.

ಆರೋಪಿ ಗುಜರಾತ್​​ನಲ್ಲಿರುವ ಕುರಿತು ಖಚಿತ ಮಾಹಿತಿ ಪಡೆದಿದ್ದ ತಂಡ ಆತನ ಬೆನ್ನು ಬಿದ್ದಿತ್ತು. ಆದರೆ ಇದರ ಸುಳಿವು ಪಡೆದಿದ್ದ ಖದೀಮ ಅಲ್ಲಿಂದ ಎಸ್ಕೇಪ್ ಆಗಿದ್ದ. ಅಲ್ಲಿಂದ ಸುಮಾರು 1 ಸಾವಿರ ಕಿ.ಮೀವರೆಗೂ ಬೆನ್ನು ಹತ್ತಿದ ಎಇಸಿ ತಂಡ ಕೊನೆಗೆ ಕರ್ನಾಟಕದ ಹುಬ್ಬಳ್ಳಿಯಲ್ಲಿ ಆತನನ್ನು ವಶಕ್ಕೆ ಪಡೆಯವಲ್ಲಿ ಯಶಸ್ವಿಯಾಗಿದೆ ಎಂದು ಎಇಸಿಯ ಹಿರಿಯ ಇನ್ಸ್​​​ಪೆಕ್ಟರ್ ಅಜಯ್​ ಸಾವಂತ್​ ತಿಳಿಸಿದ್ದಾರೆ.

ಉದ್ಯಮಿಗೆ ತಾನು ಐಪಿಎಸ್​ ಅಧಿಕಾರಿ ಎಂದು ನಂಬಿಸಿ ಹಣ ಕೀಳಲು ಯತ್ನಿಸಿದ್ದ ಈತ ಆ ಹಣದಲ್ಲಿ ಐಶಾರಾಮಿ ಜೀವನ ನಡೆಸುವ ಕನಸು ಕಂಡಿದ್ದ. ಜವಳಿ ಉದ್ಯಮಿಯಾಗಿದ್ದ ಸೂರತ್​​​​ನ ವ್ಯಕ್ತಿಗೆ ಮುಂಬೈನಲ್ಲಿ ವ್ಯಕ್ತಿಯೋರ್ವರು ಕಂದಾಯ ಇಲಾಖೆಯಡಿಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆ ಮುಂಬೈಗೆ ಆಗಮಿಸುತ್ತಿದ್ದ ಉದ್ಯಮಿಯ ಕುರಿತು ನಕಲಿ ಆಫಿಸರ್ ಶರ್ಮಾಗೆ ಮಾಹಿತಿ ತಿಳಿದಿದ್ದು, ಇದರಿಂದಾಗಿ ಶರ್ಮಾ ಉದ್ಯಮಿಗೆ ಪ್ರಕರಣದಿಂದ ಹೊರಬರಲು ಸಹಾಯ ಮಾಡುವುದಾಗಿ ತಿಳಿಸಿ ವಂಚನೆಗೆ ಇಳಿದಿದ್ದ.

ಇನ್ನು ಕಂದಾಯ ಇಲಾಖೆಯ ಪ್ರಕರಣ ಇತ್ಯರ್ಥ ಪಡಿಸುವ ಕುರಿತಂತೆ ಚರ್ಚ್​ ಗೇಟ್​​ನ ಹೆಸರಾಂತ ಹೋಟೆಲ್​​ನಲ್ಲಿ ಇಬ್ಬರೂ ಭೇಟಿಯಾದಾಗ, ಶರ್ಮಾ 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ಈ ವೇಳೆ ಇಬ್ಬರ ನಡುವೆ ವಾಗ್ವಾದಕ್ಕೂ ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯ ಬಳಿಕ ಹೋಟೆಲ್​ ಕೋಣೆಯಲ್ಲಿ ಬಂಧಿಸಿಟ್ಟು, ತಲೆಗೆ ಬಂದೂಕು ಹಿಡಿದು ಅಪಹರಿಸಿ ಗುಜರಾತ್​ಗೆ ಕರೆತರಲಾಗಿದೆ. ಅಲ್ಲಿ ಉದ್ಯಮಿಯಿಂದ 16 ಲಕ್ಷ ನಗದು, ಎರಡು ಐಫೋನ್, ಎರಡು ವಾಚ್​​ಗಳನ್ನು ಶರ್ಮಾ ಕಿತ್ತುಕೊಂಡಿದ್ದ. ಬಳಿಕ ಉದ್ಯಮಿ ಗುಜರಾತ್​ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅಲ್ಲಿಂದ ಮುಂಬೈ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

ABOUT THE AUTHOR

...view details