ನವದೆಹಲಿ:ಸದ್ಯ ದೇಶದಲ್ಲಿ ಕೊರೊನಾ ವೈರಸ್ನಿಂದಾಗಿ ಲಾಕ್‌ಡೌನ್ ಜಾರಿಯಲ್ಲಿದೆ. ಈ ನಡುವೆ ಹಲವು ಸುಳ್ಳು ಸುದ್ದಿಗಳು ಹಬ್ಬುತ್ತಿದ್ದು, ಜನರು ಇವುಗಳನ್ನು ನಂಬಿ ಫಾರ್ವರ್ಡ್ ಮಾಡುವಾಗ ಎಚ್ಚರವಿರುವ ಅಗತ್ಯವಿದೆ.
ಕೊರೊನಾ ವೈರಸ್ ಕುರಿತಂತೆ ಯಾವುದೇ ಜೋಕ್‌ಗಳನ್ನು ಪೋಸ್ಟ್ ಮಾಡುವ ವಾಟ್ಸ್ಆ್ಯಪ್ ಗ್ರೂಪ್ ಅಡ್ಮಿನ್ ಮತ್ತು ಗ್ರೂಪ್ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಗ್ರೂಪ್ ಅಡ್ಮಿನ್ ಆ ಗ್ರೂಪ್ ಅನ್ನು 2 ದಿನ ಕ್ಲೋಸ್ ಮಾಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದು ಹರಿದಾಡುತ್ತಿದೆ. ಆದರಿದು ಸುಳ್ಳು ಸುದ್ದಿ. ಇಂತಹ ಯಾವುದೇ ಆದೇಶವನ್ನು ಸರ್ಕಾರ ಹೊರಡಿಸಿಲ್ಲ.
ನಕಲಿ ಯುಪಿಐ ಐಡಿ ಬಗ್ಗೆ ಎಚ್ಚರವಿರಲಿ:
ಕೊರೊನಾ ವೈರಸ್ ಸಂಬಂಧ ದೇಣಿಗೆ ನೀಡುವವರಿಗಾಗಿ ಆರಂಭಿಸಲಾಗಿರುವ ಪಿಎಂ ಕೇರ್ಸ್ ಫಂಡ್ (PM CARES Fund) ಗೆ ಸಂಬಂಧಿಸಿದಂತೆ ಹಲವು ನಕಲಿ ಯುಪಿಐ ಐಡಿಗಳು ಹರಿದಾಡುತ್ತಿವೆ. ಇವೆಲ್ಲಾ ನಕಲಿಯಾಗಿದ್ದು, ದೇಣಿಗೆ ನೀಡುವ ಮೊದಲು ಜನರು ಐಡಿಯನ್ನು ಸರಿಯಾಗಿ ವೆರಿಫೈ ಮಾಡಬೇಕು. ಪಿಎಂ ಕೇರ್ಸ್ ಫಂಡ್ನ ಸರಿಯಾದ ಯುಪಿಐ ಐಡಿ pmcares@sbi.