ನಟ ತಲಪತಿ ವಿಜಯ್ ಮನೆಗೆ 2020 ರ ಜುಲೈ 4ರ ಮಧ್ಯರಾತ್ರಿ ಬಾಂಬ್ ಹಾಕಿರುವ ಬಗ್ಗೆ ಬೆದರಿಕೆ ಕರೆಯೊಂದು ಬಂದಿತ್ತು. ಈ ಕರೆಯನ್ನು ವಿಲ್ಲುಪುರಂ ಜಿಲ್ಲೆಯ ಮರಕ್ಕನಂನಿಂದ ಮಾನಸಿಕ ಅಸ್ವಸ್ಥನಂತೆ ಕಾಣುವ 21 ವರ್ಷದ ವ್ಯಕ್ತಿ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಒಂದೆರಡು ಗಂಟೆಗಳ ಕಾಲ ವಿಜಯ್ ನಿವಾಸದಲ್ಲಿ ತಪಾಸಣೆ ಮಾಡಿದ ನಂತರ ಇದು ಫೇಕ್ ಕಾಲ್ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸರ್ಕಾರ್ ತಲಪತಿ ವಿಜಯ್ ಮನೆಗೆ ಬಾಂಬ್ ಬೆದರಿಕೆ ಕರೆ - Thalapathy Vijay’s house in Saligramam
ಸಾಲಿಗ್ರಾಮದಲ್ಲಿರುವ ತಲಪತಿ ವಿಜಯ್ ಅವರ ಮನೆಗೆ ಬಾಂಬ್ ಹಾಕಲಾಗಿದೆ ಎಂಬ ಬೆದರಿಕೆ ಕರೆಯೊಂದು ತಮಿಳುನಾಡು ಪೊಲೀಸ್ ನಿಯಂತ್ರಣ ಕೊಠಡಿಗೆ ಬಂದಿದೆ.
![ಸರ್ಕಾರ್ ತಲಪತಿ ವಿಜಯ್ ಮನೆಗೆ ಬಾಂಬ್ ಬೆದರಿಕೆ ಕರೆ ಸರ್ಕಾರ್ ತಲಪತಿ ವಿಜಯ್](https://etvbharatimages.akamaized.net/etvbharat/prod-images/768-512-7903087-49-7903087-1593947354937.jpg)
ಕರೆ ಮಾಡಿದ ವ್ಯಕ್ತಿ ಈ ಹಿಂದೆ ಮಾಜಿ ಮುಖ್ಯಮಂತ್ರಿ ಜಯ ಲಲಿತಾ, ಪುದುಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಮತ್ತು ಪುದುಚೇರಿ ಗವರ್ನರ್ ಕಿರಣ್ ಬೇಡಿ ಅವರ ಕಚೇರಿಗೂ ಇದೇ ರೀತಿಯ ಕರೆಗಳನ್ನು ಮಾಡಿದ್ದನಂತೆ. ತುರ್ತು ಸಂಖ್ಯೆ 100 ಕ್ಕೆ ಕರೆ ಮಾಡಿ, ಬಳಿಕ ಅನಾಮಧೇಯ ಬೆದರಿಕೆ ಹಾಕಿ ಮತ್ತು ಹ್ಯಾಂಗ್ ಅಪ್ ಮಾಡಿದ್ದನಂತೆ. ಪೊಲೀಸರು ಆತನ ಕರೆ ಮತ್ತು ಸ್ಥಳವನ್ನು ಪತ್ತೆ ಹಚ್ಚಿದಾಗ, ಇದನ್ನು ತಾನೇ ಮಾಡಿರುವುದೆಂದು ಒಪ್ಪಿಕೊಂಡಿದ್ದಾನೆ. ಈತನ ಬಳಿ ಮೊಬೈಲ್ ಇಲ್ಲದಿದ್ದರೂ ಮನೆಯವರಿಗೆ ಫೋನ್ ಮೂಲಕ ಕರೆ ಮಾಡುತ್ತಿದ್ದ ಎನ್ನುವ ವಿಚಾರ ಗೊತ್ತಾಗಿದೆ. ಪೊಲೀಸರು ಆತನ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದ ನಂತರ ಬಿಡುಗಡೆ ಮಾಡಿದ್ದಾರೆ.