ಮುಂಬೈ(ಮಹಾರಾಷ್ಟ್ರ): ಪಾಲ್ಘರ್ ನಲ್ಲಿ ನಡೆದ ಗುಂಪು ಹತ್ಯೆಯಲ್ಲಿ ಗುರುವಾರ ರಾತ್ರಿ ಮೂವರು ಸಾವನ್ನಪ್ಪಿದ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಮಾಜಿ ಸಿಎಂ, ಬಿಜೆಪಿಯ ಹಿರಿಯ ಮುಖಂಡ ದೇವೇಂದ್ರ ಫಡ್ನವಿಸ್ ಭಾನುವಾರ ಒತ್ತಾಯಿಸಿದ್ದಾರೆ.
ಪಾಲ್ಘರ್ ಗುಂಪು ಹತ್ಯೆ ಕುರಿತು ಉನ್ನತ ಮಟ್ಟದ ತನಿಖೆ ನಡೆಯಲಿ: ಫಡ್ನವಿಸ್ - Devendra Fadnavis
ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಫಡ್ನವಿಸ್, ಪಾಲ್ಘರ್ ಗುಂಪು ಹತ್ಯೆ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಭಾನುವಾರ ಒತ್ತಾಯಿಸಿದ್ದಾರೆ.
ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಫಡ್ನವಿಸ್, ಘಟನೆಯ ಸಂದರ್ಭದಲ್ಲಿ ಸ್ಥಳೀಯ ಪೊಲೀಸರ ಪಾತ್ರದ ಬಗ್ಗೆ ಪ್ರಶ್ನಿಸಿದರು. ಪಾಲ್ಘರ್ನಲ್ಲಿ ಗುಂಪು ಹತ್ಯೆ ನಡೆದಿರುವುದು ಅತ್ಯಂತ ಕ್ರೂರ ಮತ್ತು ಗಂಭೀರ ವಿಷಯ. ಜನರು ಕೋಲುಗಳನ್ನು ಹಿಡಿದು ಹಲ್ಲೆಗೆ ಮುಂದಾದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಜಾಣಕುರುಡುತನ ತೋರುತ್ತಿರುವುದೇ ನಮಗೆ ಹೆಚ್ಚು ಆಘಾತಕಾರಿಯಾಗಿದೆ. ಪೊಲೀಸರು ಆ ಮೂವರನ್ನು ಜನಸಮೂಹದ ಕೈಗೊಪ್ಪಿಸಿ ಕಾನೂನು ಕೈಗೆ ತೆಗೆದುಕೊಂಡಿದ್ದು, ನಾಚಿಕೆಗೇಡಿನ ಸಂಗತಿ ಎಂದು ಪ್ರತಿಪಕ್ಷದ ನಾಯಕ ಹೇಳಿದರು.
ಪ್ರಕರಣದಲ್ಲಿ ಸಾವನ್ನಪ್ಪಿದವರು ಚಿಕ್ನೆ ಮಹಾರಾಜ್ ಕಲ್ಪವ್ರಕ್ಷಗಿರಿ (70), ಸುಶಿಲ್ಗಿರಿ ಮಹಾರಾಜ್ (35) ಮತ್ತು ಅವರ ಕಾರು ಚಾಲಕ ನಿಲೇಶ್ ತೆಲ್ಗಡೆ (30) ಎಂದು ಗುರುತಿಸಲಾಗಿದೆ. ಇವರು ಪಾಲ್ಘರ್ ದಾಟುತ್ತಿದ್ದಾಗ ಗುಂಪೊಂದು ಅವರನ್ನು ಕಳ್ಳರು ಎಂಬ ಅನುಮಾನದಿಂದ ತಮ್ಮ ಕಾರಿನಿಂದ ಹೊರಗೆ ಎಳೆದೊಯ್ದು ಹೊಡೆದು ಸಾಯಿಸಿದ್ದಾರೆ.