ಕರ್ನಾಟಕ

karnataka

ETV Bharat / bharat

ಬಿಕ್ಕಟ್ಟಿನ ನಡುವೆಯೂ ಚೆಕ್​ಗೆ ಸಹಿ ಮಾಡಿದ ಫಡ್ನವೀಸ್​​​... ರೈತರಿಗಾಗಿ 5380 ಕೋಟಿ ರೂ. ರಿಲೀಸ್​​​​! - ದೇವೇಂದ್ರ ಫಡ್ನವೀಸ್ ಕೆಲಸ ಶುರು

ಮಹಾರಾಷ್ಟ್ರದಲ್ಲಿ ಪ್ರತಿದಿನ ರಾಜಕೀಯ ಹಗ್ಗಜಗ್ಗಾಟ ನಡೆಯುತ್ತಿದ್ದು, ಇದರ ಮಧ್ಯೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ದೇವೇಂದ್ರ ಫಡ್ನವೀಸ್​ ಆಡಳಿತ ಶುರು ಮಾಡಿದ್ದಾರೆ.

ದೇವೇಂದ್ರ ಫಡ್ನವೀಸ್​ ಕೆಲಸ ಆರಂಭ

By

Published : Nov 25, 2019, 7:18 PM IST

ಮುಂಬೈ:ಮಹಾರಾಷ್ಟ್ರದ ದಿಢೀರ್​ ಬೆಳವಣಿಗೆಯಲ್ಲಿ ದೇವೇಂದ್ರ ಫಡ್ನವೀಸ್​​ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇದೇ ವಿಷಯವನ್ನಿಟ್ಟುಕೊಂಡು ಎನ್​ಸಿಪಿ+ಶಿವಸೇನೆ ಹಾಗೂ ಕಾಂಗ್ರೆಸ್​ ಸುಪ್ರೀಂಕೋರ್ಟ್​ ಮೆಟ್ಟಿಲೇರಿವೆ.

ರಾಜಕೀಯ ಬಿಕ್ಕಟ್ಟಿನ ನಡುವೆ ಕೆಲಸ ಆರಂಭಿಸಿರುವ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​​, ಇಂದು ಚೆಕ್​ವೊಂದಕ್ಕೆ ಸಹಿ ಮಾಡುವ ಮೂಲಕ ಆಡಳಿತ ನೀಡಲು ಮುಂದಾಗಿದ್ದಾರೆ. ಮಳೆಯಿಂದ ಹಾನಿಗೊಳಗಾಗಿರುವ ರೈತರಿಗಾಗಿ 5380 ಕೋಟಿ ರೂ. ರಿಲೀಸ್​ ಮಾಡಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕುಸುಮ್ ವೆಂಗುರ್ಲೇಕರ್ ಹೆಸರಿನ ಮಹಿಳೆಗೆ ಚೆಕ್ ವಿತರಿಸಿದ್ದಾರೆ.

ಮುಖ್ಯಮಂತ್ರಿ ಸಚಿವಾಲಯಕ್ಕೆ ಆಗಮಿಸಿರುವ ಅವರು ಪರಿಹಾರ ನಿಧಿ ಚಕ್​ಗೆ ಸಹಿ ಹಾಕಿದ್ದು, ಅದನ್ನ ಮಹಿಳೆಗೆ ಹಸ್ತಾಂತರ ಮಾಡುವ ಫೋಟೋವನ್ನ ಇದೀಗ ಸಿಎಂ ಆಫ್​ ಮಹಾರಾಷ್ಟ್ರದಲ್ಲಿ ಹಾಕಿ ಟ್ವೀಟ್​ ಮಾಡಲಾಗಿದೆ. ಇದಾದ ಬಳಿಕ ವಿಶ್ವಬ್ಯಾಂಕ್​ ಪ್ರತಿನಿಧಿಗಳೊಂದಿಗೆ ಬರ ನಿರ್ವಹಣಾ ಕಾರ್ಯಕ್ರಮದ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಚರ್ಚೆ ಸಹ ನಡೆಸಿದರು.

ಇನ್ನು ತಮ್ಮ ಬಳಿ 164 ಶಾಸಕರು ಇದ್ದು, ಖುದ್ದಾಗಿ ರಾಜ್ಯಪಾಲರು ಬಂದು ಗ್ರ್ಯಾಂಡ್​ ಹಯತ್​ ಹೋಟೆಲ್​​ನಲ್ಲಿ ವೀಕ್ಷಣೆ ಮಾಡಬಹುದು ಎಂದು ಶಿವಸೇನೆ ಮುಖಂಡ ಸಂಜಯ್​ ರಾವತ್​ ಹೇಳಿದ್ದಾರೆ.

ABOUT THE AUTHOR

...view details