ಕರ್ನಾಟಕ

karnataka

ETV Bharat / bharat

ಖಾಸಗಿ ಕಂಪೆನಿಯಲ್ಲಿ ಕೆಲಸ ಕಳೆದುಕೊಂಡು ಬೀದಿ ಬದಿ ವ್ಯಾಪಾರಕ್ಕೆ ಮುಂದಾದ ನೌಕರ! - ಕೋವಿಡ್ ವೈರಸ್ ಹೊಡೆತ

ಕೊರೊನಾದಿಂದ ಖಾಸಗಿ ವಲಯದಲ್ಲಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದ್ದು, ಕೆಲಸ ಕಳೆದುಕೊಂಡ ನೌಕಕರು ಜೀವನ ನಿರ್ವಹಣೆಗೆ ವಿವಿಧ ವ್ಯಾಪಾರ ಮಾಡಲು ಮುಂದಾಗುತ್ತಿದ್ದಾರೆ.

Hariyana
Hariyana

By

Published : Sep 5, 2020, 6:45 PM IST

ರೋಹ್ಟಕ್:ಕೊರೊನಾ ನಿಯಂತ್ರಿಸಲು ಸರ್ಕಾರ ಲಾಕ್​ಡೌನ್​ ಹೇರಿದ್ದರಿಂದ ಸಾಕಷ್ಟು ಜನರು ಉದ್ಯೋಗವನ್ನು ಕಳೆದುಕೊಂಡು, ಜೀವನ ನಿರ್ವಹಣೆಗಾಗಿ ಅನ್ಯ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದಾರೆ.

ಅದರಂತೆ ಹರಿಯಾಣ ಮೂಲದ ವ್ಯಕ್ತಿ ರೋಹ್ಟಕ್​ನಲ್ಲಿನ ಖಾಸಗಿ ಕಂಪೆನಿಯಲ್ಲಿ ಪ್ಲಾಂಟ್​​ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಕೊರೊನಾದಿಂದ ಇವರು ಕೆಲಸ ಕಳೆದುಕೊಂಡರು. ಇದೀಗ ಕುಟುಂಬ ನಿರ್ವಹಣೆಗಾಗಿ ಬೀದಿ ಬದಿ ತರಕಾರಿ ಮಾರಾಟ ಮಾಡಲು ಮುಂದಾಗಿದ್ದಾರೆ.

ಖಾಸಗಿ ವಲಯವು ಸಂಕಷ್ಟದಲ್ಲಿದೆ. ನಮಗೆ ಬೇರೆ ಕೆಲಸಗಳ ಅವಕಾಶಗಳಿಲ್ಲ. ಕುಟುಂಬವನ್ನು ಸಾಗಿಸಲು ತರಕಾರಿ ಮಾರಾಟ ಮಾಡುತ್ತಿರುವುದಾಗಿ ಕೆಲಸ ಕಳೆದುಕೊಂಡ ನೌಕರ ರಿಂಕು ವಿವರಿಸಿದರು. ಜತೆಗೆ ಕೆಲಸ ಕಳದುಕೊಂಡಿರುವ ನನ್ನ ಅನೇಕ ಸ್ನೇಹಿತರು ಇದೇ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಕೊರೊನಾದಿಂದ ಲಾಕ್​ಡೌನ್ ಆರಂಭವಾದಗಿನಿಂದ ಗಣನೀಯ ಸಂಖ್ಯೆಯ ವ್ಯವಹಾರಗಳು ನೆಲಕಚ್ಚಿವೆ. ಇದರಿಂದ ಅನೇಕ ಕಂಪೆನಿಯ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ.

ABOUT THE AUTHOR

...view details