ಚೆನ್ನೈ (ತಮಿಳುನಾಡು):ತನ್ನ 49ನೇ ವರ್ಷಾಚರಣೆಯನ್ನು ಆಚರಿಸುತ್ತಿರುವ ಆಡಳಿತಾರೂಢ ಎಐಎಡಿಎಮ್ಕೆ, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಿಂದಾಗಿ ಮತ್ತೊಂದು ಅಗ್ನಿ ಪರೀಕ್ಷೆಯನ್ನು ಎದುರಿಸಲಿದೆ. ವಾರ್ಷಿಕೋತ್ಸವವನ್ನು ಕೂಡಾ ಪಕ್ಷವು ಹೆಚ್ಚು ಅಭಿಮಾನಿಗಳಿಲ್ಲದೆ ಸರಳವಾಗಿ ಆಚರಿಸಿಕೊಂಡಿದೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಕುರಿತು ನಡೆದ ಒಳಜಗಳದಿಂದ ಪಕ್ಷವು ಇದೀಗ ಚೇತರಿಸಿಕೊಂಡಿದೆ. ಆದರೆ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಜಯಲಲಿತಾ ವರ್ಚಸ್ಸು ಆಧಾರವಾಗಬಹುದೇ ಎಂದು ಕಾದುನೋಡಬೇಕಾಗಿದೆ. ಏಕೆಂದರೆ ಡಿಎಂಕೆ ಪಕ್ಷವೂ ಕೂಡಾ ಚುನಾವಣಾ ಯುದ್ಧ ಯಂತ್ರದಲ್ಲಿ ಸಕ್ರಿಯವಾಗಿದೆ.
ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ (ಇಪಿಎಸ್) ಮತ್ತು ಉಪ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ (ಒಪಿಎಸ್) ಅವರ ಆಡಳಿತದಲ್ಲಿ ಪಕ್ಷವು ಕಠಿಣ ಸವಾಲುಗಳನ್ನು ಎದುರಿಸುತ್ತಿದೆ.