ನವದೆಹಲಿ :ಸಾಮಾಜಿಕ ಮಾಧ್ಯಮ ದೈತ್ಯ ಫೇಸ್‌ಬುಕ್ ಸ್ವೀಡಿಷ್ನ ಮ್ಯಾಪಿಂಗ್ ಸ್ಟಾರ್ಟ್ಅಪ್ ಮ್ಯಾಪಿಲ್ಲರಿಯನ್ನು ಸ್ವಾಧೀನಪಡಿಸಿಕೊಂಡಿದೆ. ಜೂನ್ 18ರಂದು ಕಂಪನಿಯ ಬ್ಲಾಗ್ ಪೋಸ್ಟ್‌ನಲ್ಲಿ ಮ್ಯಾಪಿಲ್ಲರಿಯನ್ನು ಫೇಸ್‌ಬುಕ್ ಸ್ವಾಧೀನಪಡಿಸಿಕೊಂಡಿರುವುದಾಗಿ ಘೋಷಿಸಿತ್ತು. ಮ್ಯಾಪಿಲ್ಲರಿ ಸಿಇಒ ಜಾನ್ ಎರಿಕ್ ಸೊಲೆಮ್ ಸ್ವಾಧೀನದ ಬಗ್ಗೆ ಯಾವುದೇ ಹಣಕಾಸಿನ ವಿವರಗಳನ್ನು ನೀಡಲಿಲ್ಲ. ಆದರೆ, ಮ್ಯಾಪಿಲ್ಲರಿ ಬಳಕೆದಾರರಿಗೆ ಅದರ ಕಾರ್ಯವಿಧಾನ ಹೆಚ್ಚು ಬದಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಫೇಸ್‌ಬುಕ್ ಸ್ವಾಧೀನಕ್ಕೆ ಮ್ಯಾಪಿಲ್ಲರಿ.. ಯಾಕೆಂದು, ಸ್ವತಃ ಮ್ಯಾಪಿಲ್ಲರಿಗೇ ಗೊತ್ತಿಲ್ವಂತೆ!! - ಮ್ಯಾಪಿಲ್ಲರಿ
ಮ್ಯಾಪಿಲ್ಲರಿ ಅಂದ್ರೆ. ಇದು ಸಾಮಾನ್ಯವಾಗಿ ಗೂಗಲ್ ಮ್ಯಾಪ್ ತರಾನೆ ಕಾರ್ಯ ನಿರ್ವಹಿಸುತ್ತದೆ. ಆದರೆ ಇದರಲ್ಲಿ ಬಳಕೆದಾರರು ಅವರ ಸುತ್ತಲೂ ಇರುವ ಫೊಟೋಗಳನ್ನು ಅಪ್ಲೋಡ್ ಮಾಡುವ ಅವಕಾಶವಿದೆ..
ಮ್ಯಾಪಿಲ್ಲರಿ ಅಂದ್ರೆ ಇದು ಸಾಮಾನ್ಯವಾಗಿ ಗೂಗಲ್ ಮ್ಯಾಪ್ ತರಾನೆ ಕಾರ್ಯ ನಿರ್ವಹಿಸುತ್ತದೆ. ಆದರೆ, ಇದರಲ್ಲಿ ಬಳಕೆದಾರರು ಮಾರ್ಗಸೂಚಿಗಾಗಿ ಅವರ ಸುತ್ತಲೂ ಇರುವ ಫೊಟೋಗಳನ್ನು ಅಪ್ಲೋಡ್ ಮಾಡಬಹುದು. ಇದು ವಿಶ್ವದಲ್ಲಿ ರಸ್ತೆ ಮಟ್ಟದ ಮ್ಯಾಪನ್ನು ಗುರುತಿಸುವ ಸಲುವಾಗಿ ನಿರ್ಮಾಣವಾಗಿದೆ. ತಮ್ಮ ನೆರೆಹೊರೆಯಲ್ಲಿರುವ ಫೊಟೋಗಳನ್ನು ಅಪ್ಲೋಡ್ ಮಾಡಿ ಮಾಹಿತಿ ನೀಡಬಹುದು. ತಮ್ಮದೇ ಮ್ಯಾಪಿಂಗ್ ಸಾಫ್ಟ್‌ವೇರ್ ತಯಾರಿಸುವ ಜನರು ಸ್ವಂತ ಮ್ಯಾಪಿಂಗ್ ತಯಾರಿಸುವ ಉದ್ದೇಶಗಳಿಗೂ ಕೂಡಾ ಈ ಮ್ಯಾಪಿಲ್ಲರಿಯನ್ನು ಬಳಸಬಹುದು.
ಮ್ಯಾಪಿಲ್ಲರಿ ಅವರ ಬ್ಲಾಗ್ ಪೋಸ್ಟ್ ಪ್ರಕಾರ, ಇದರ ಡೇಟಾವು ಮುಕ್ತವಾಗಿದೆ. ವಾಣಿಜ್ಯ ಮತ್ತು ವಾಣಿಜ್ಯೇತರ ಉದ್ದೇಶಗಳ ಬಳಕೆಗೂ ಕೂಡಾ ಮುಕ್ತವಾಗಿ ಉಳಿದಿದೆ. ಆದ್ದರಿಂದ ಫೇಸ್‌ಬುಕ್ ಇನ್ನೂ ಅದನ್ನು ತಡೆಹಿಡಿದಿದೆಯಾ ಎಂಬುವುದು ಅರ್ಥವಾಗುತ್ತಿಲ್ಲ. ಆದಾಗ್ಯೂ, ಮ್ಯಾಪಿಲ್ಲರಿಯ ಮಾರ್ಪಾಡಿನೊಂದಿಗೆ ಫೇಸ್‌ಬುಕ್ ಏನು ಮಾಡಲು ಬಯಸಿದೆ, ಅದರ ಉದ್ದೇಶ ಏನೆಂಬುದು ಸಂಪೂರ್ಣ ಸ್ಪಷ್ಟವಾಗಿಲ್ಲ ಎಂದಿದೆ.