ಬಾಲಸೋರ್(ಒಡಿಶಾ):ಫೇಸ್ಬುಕ್ನಲ್ಲಿ ಪರಿಚಯವಾದ ಜೋಡಿಯೊಂದು ಪರಸ್ಪರ ಭೇಟಿಯಾದ ವೇಳೆ ಗ್ರಾಮಸ್ಥರ ಕೈಯಲ್ಲಿ ರೆಡ್ಹ್ಯಾಡ್ ಆಗಿ ಸಿಕ್ಕಿಬಿದ್ದು, ಮದುವೆಯಾಗಿರುವ ಘಟನೆ ಒಡಿಶಾದ ಬಾಲಸೋರ್ನಲ್ಲಿ ನಡೆದಿದೆ.
ಫೇಸ್ಬುಕ್ನಲ್ಲಿ ಲವ್: ಒಲ್ಲದ ಮನಸ್ಸಿನಿಂದಲೇ ಮದುವೆಯಾದ ಜೋಡಿ!
ಫೇಸ್ಬುಕ್ನಲ್ಲಿ ಪರಿಚಯವಾಗಿ ಲವ್ನಲ್ಲಿ ಬಿದ್ದಿದ್ದ ಜೋಡಿಯೊಂದು ಗ್ರಾಮಸ್ಥರ ಕೈಯಲ್ಲಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದು, ಇದೀಗ ಒಲ್ಲದ ಮನಸ್ಸಿನಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಘಟನೆ ನಡೆದಿದೆ.
ಒಡಿಶಾದ ಗುಲುನಿಯಾ ಹಳ್ಳಿಯವಳಾಗಿರುವ ಸುರೇಂದ್ರ ಬೆಹಿರಾ ಎಂಬ ವ್ಯಕ್ತಿಯ ಮಗಳು ಕುಬಾಬುಪಟ್ನಾ ಗ್ರಾಮದ ಜುಧಿಸ್ತಿರ್ ಬೆಹೆರಾ ಮಗನೊಂದಿಗೆ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದಾರೆ. ಕೆಲ ದಿನಗಳ ಕಾಲ ಪರಸ್ಪರ ಚಾಟ್ ನಡೆಸಿರುವ ಇವರು ತದನಂತರ ಮೊಬೈಲ್ ನಂಬರ್ ಸಹ ಬದಲಾಯಿಸಿಕೊಂಡಿದ್ದಾರೆ. ಜತೆಗೆ ಪ್ರೀತಿಯ ಬಲೆಗೆ ಬಿದ್ದ ಈ ಜೋಡಿ ಭೇಟಿಯಾಗುವ ನಿರ್ಧಾರ ಸಹ ಮಾಡಿದ್ದಾರೆ.
ಅದರಂತೆ ಹುಡುಗಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಲ್ಲಿಗೆ ಯುವಕ ತೆರಳಿದ್ದಾನೆ. ಆತ ಮನೆಯೊಳಗೆ ಹೊಗುತ್ತಿರುವುದನ್ನ ಸ್ಥಳೀಯರು ನೋಡಿ, ಇಬ್ಬರನ್ನು ರೆಡ್ಹ್ಯಾಂಡ್ ಆಗಿ ಹಿಡಿದು ಹಾಕಿದ್ದಾರೆ. ತದನಂತರ ಹುಡುಗಿ ತಾಯಿಗೆ ಮಾಹಿತಿ ನೀಡಿದ್ದು, ಆಕೆಯ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲೇ ಇವರ ವಿವಾಹ ಸಹ ನಡೆಸಲಾಗಿದೆ.