ಸ್ಯಾನ್ ಫ್ರಾನ್ಸಿಸ್ಕೋ: ಕೋವಿಡ್-19 ಬಿಕ್ಕಟ್ಟಿನ ಸಮಯದಲ್ಲಿ ಫೇಸ್‌ಬುಕ್ ತನ್ನ ಬಳಕೆದಾರರಿಗೆ ಎರಡು ಹೊಸ ಇಮೋಜಿಯನ್ನು ನೀಡಿದೆ.
ಈವರೆಗೆ ಲೈಕ್ ಬಟನ್, ಸ್ಮೈಲಿಂಗ್ ಎಮೋಜಿ, ಬೇಸರ ಸೂಚಿಸುವ ಇಮೋಜಿ, ಕೋಪ ವ್ಯಕ್ತ ಪಡಿಸುವ ಇಮೋಜಿ, ಆಶ್ಚರ್ಯಸೂಚಕ ಹಾಗೂ ಕೆಂಪು ಹೃದಯದ ಇಮೋಜಿ ಇತ್ತು. ಈಗ ಏಳನೆಯದ್ದಾಗಿ ''ಕೇರ್'' ಇಮೋಜಿಯ ಅಪ್ಡೇಟ್ ನೀಡಲಾಗಿದೆ.
ಹೊಸ ಫೇಸ್‌ಬುಕ್‌ನ ಕೇರ್ ಅಥವಾ ಆರೈಕೆ ಎಮೋಜಿ ಪ್ರತಿಕ್ರಿಯೆ ಆಯ್ಕೆಯು ಫೋಟೋ ಅಥವಾ ವೀಡಿಯೊದ ಬಗ್ಗೆ ಕಾಮೆಂಟ್ ಮಾಡುವಾಗ ಕಾಳಜಿಯ ಮತ್ತು ಒಗ್ಗಟ್ಟಿನ ಸಂಕೇತವಾಗಿದೆ, ವಿಶೇಷವಾಗಿ COVID-19 ಸಾಂಕ್ರಮಿಕ ಸಮಯದಲ್ಲಿ, ಈ ಹೊಸ ಕೇರಿಂಗ್ ಪ್ರತಿಕ್ರಿಯೆ ಫೇಸ್‌ಬುಕ್ ಡೆಸ್ಕ್‌ಟಾಪ್ ಮತ್ತು ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ.
ಇದರಲ್ಲಿ ಹೃದಯವನ್ನು ಅಪ್ಪಿಕೊಂಡಿರೋ ಇಮೋಜಿ ಒಂದಾದ್ರೆ, ಮತ್ತೊಂದು ಮಿಡಿಯುವ ಹೃದಯ. ನಮ್ಮ ಪ್ರೀತಿಪಾತ್ರರನ್ನು ನಾವು ಬೆಂಬಲಿಸುತ್ತೇವೆ. ಅವರೊಟ್ಟಿಗೆ ನಿಲ್ಲುತ್ತೇವೆ. ಅವರ ದುಃಖಕ್ಕೆ ನಾವು ಸಮಾಧಾನ ಪಡಿಸುತ್ತೇವೆ ಎಂದು ತೋರಿಸಲು ಈ ಇಮೋಜಿಗಳನ್ನ ಬಳಸಬಹುದು.
ಇನ್ನು ಈ ಎರಡೂ ಇಮೋಜಿಗಳಲ್ಲಿ , ಹೃದಯವನ್ನು ಅಪ್ಪಿಕೊಂಡಿರೋ ಇಮೋಜಿಯನ್ನು ಫೇಸ್‌ಬುಕ್ ಆ್ಯಪ್ನಲ್ಲಿ ಮತ್ತೊಂದು ಮೆಸೆಂಜರ್ನಲ್ಲಿ ಲಭ್ಯವಿದೆ.