ಕರ್ನಾಟಕ

karnataka

ETV Bharat / bharat

ಮುಖ ಮರೆ ಮಾಡಲ್ಲ, ಅಸಲಿ ರೂಪ ತೋರುತ್ತದೆ ಈ ಮಾಸ್ಕ್​: ಕೇರಳದಲ್ಲಿ ಹೊಸ ಐಡಿಯಾ

ಕೇರಳದ ಕೊಟ್ಟಾಯಂನ ಬಿನೇಶ್​​ ಜಿ. ಪಾಲ್​ ಎಂಬ ಫೋಟೋಗ್ರಾಫರ್​​ ರೂಪಿಸಿರುವ ಈ ಮಾಸ್ಕ್​​ ಅನ್ನು ಬಳಸಿದರೆ ವ್ಯಕ್ತಿಯನ್ನು ಸುಲಭವಾಗಿ ಗುರುತಿಸಬಹುದು. ಮಾಸ್ಕ್ ಬಳಸುವ ವ್ಯಕ್ತಿಯ ಚಿತ್ರವನ್ನು ಮುಖಗವಸಿನ​​ ಮೇಲೆ ಮುದ್ರಿಸಿ ವಿನೂತನವಾಗಿ ತಯಾರಿಸಿದ್ದಾರೆ.

ಮಾಸ್ಕ್​​​
ಮಾಸ್ಕ್​​​

By

Published : May 26, 2020, 11:12 AM IST

ಕೊರೊನಾದಿಂದಾಗಿ ಜನರು ಮಾಸ್ಕ್​​ಗಳನ್ನು ಜೀವನದ ಅತ್ಯವಶ್ಯಕ ವಸ್ತುವನ್ನಾಗಿ ಬಳಸುತ್ತಿದ್ದಾರೆ. ಲಸಿಕೆ ಬರುವವರೆಗೂ ಕೋವಿಡ್​​ನಿಂದ ಪಾರಾಗಲು ಮಾಸ್ಕ್​​ನೊಂದಿಗೆ ಜೀವನ ಸಾಗಿಸಲೇಬೇಕಾದ ಅನಿವಾರ್ಯತೆ. ಆದರೆ, ಈ ಮಾಸ್ಕ್​​ ಬಳಕೆಯಿಂದ ಜನರ ಮುಖವನ್ನು ಪತ್ತೆ ಮಾಡುವುದು ಕಷ್ಟವಾಗಿದೆ. ಇದನ್ನೇ ಅವಕಾಶವನ್ನಾಗಿ ಬಳಸಿಕೊಂಡಿರುವ ಕೇರಳದ ಫೋಟೋಗ್ರಾಫರ್​ ಒಬ್ಬರು ವಿನೂತನವಾಗಿ ಮಾಸ್ಕ್​ ತಯಾರಿಸಿದ್ದಾರೆ.

ಕೇರಳದ ಕೊಟ್ಟಾಯಂನ ಬಿನೇಶ್​​ ಜಿ. ಪಾಲ್​ ಎಂಬ ಫೋಟೋಗ್ರಾಫರ್​​ ರೂಪಿಸಿರುವ ಈ ಮಾಸ್ಕ್​​ ಅನ್ನು ಬಳಸಿದರೆ ವ್ಯಕ್ತಿಯನ್ನು ಸುಲಭವಾಗಿ ಗುರುತಿಸಬಹುದು. ಮಾಸ್ಕ್ ಬಳಸುವ ವ್ಯಕ್ತಿಯ ಚಿತ್ರವನ್ನು ಮುಖಗವಸಿನ​​ ಮೇಲೆ ಮುದ್ರಿಸಿ ವಿನೂತನವಾಗಿ ತಯಾರಿಸಿದ್ದಾರೆ.

20 ನಿಮಿಷದಲ್ಲಿ ಮಾಸ್ಕ್​​ ರೆಡಿ:

20 ನಿಮಿಷದಲ್ಲಿ ಮುಖವಾಡದ ತಯಾರಿ ಕುರಿತು ವಿವರಿಸಿದ ಅವರು, ಯಾರಿಗೆ ಮುಖಗವಸು ಬೇಕೋ ಅವರ ಫೊಟೊವನ್ನು ಹೈ ರೆಸಲ್ಯೂಶನ್​ ಕ್ಯಾಮೆರದಲ್ಲಿ ತೆಗೆದು ಬಳಿಕ ಅದನ್ನು ಪ್ರತ್ಯೇಕ ಹಾಳೆಯ ಮೇಲೆ ಮುದ್ರಿಸಿ, ಆನಂತರ ಮಾಸ್ಕ್​​ ಮೇಲೆ ಸೂಪರ್​ ಇಂಪೋಸ್​​ ವಿಧಾನದಲ್ಲಿ ಅಂಟಿಸಬೇಕು. ಈ ವೇಳೆ ಗಲ್ಲದ ಅಳತೆಯನ್ನು ಸರಿಪಡಿಸಿಕೊಳ್ಳುತ್ತೇವೆ. ಈ ಪ್ರಕ್ರಿಯೆಗೆ 20 ನಿಮಿಷ ತೆಗೆದುಕೊಳ್ಳುತ್ತೆವೆ ಎಂದು ವಿವರಿಸಿದರು.ಪೂ

ಮಾಸ್ಕ್ ತಯಾರಿ​​​ ಹೀಗೆ ನಡೆಯುತ್ತೆ ನೋಡಿ

2ದಿನಗಳಲ್ಲಿ 1000 ಮಾಸ್ಕ್​ಗಳ ತಯಾರಿ :

ಎರಡು ದಿನಗಳಲ್ಲಿ 1000 ಮಾಸ್ಕ್​ಗಳನ್ನು ತಯಾರಿ ಮಾಡಲಾಗಿದೆ. ಇನ್ನೂ 5000 ಮಾಸ್ಕ್​ಗಳ ತಯಾರಿಗೆ ಆರ್ಡರ್​​ ಬಂದಿದೆ. ಸುತ್ತಮುತ್ತ ಯಾರು ಈ ರೀತಿಯಾದ ಮಾಸ್ಕ್​​ ತಯಾರಿ ಮಾಡುತ್ತಿಲ್ಲ. ಇನ್ನೂ ಹೆಚ್ಚಿನ ಆರ್ಡರ್​​ ಬಂದರೂ ಮಾಸ್ಕ್ ಗುಣಮಟ್ಟ,​ ಪೂರೈಕೆಯಲ್ಲಿ ನಾವು ರಾಜಿಯಾಗುವುದಿಲ್ಲಎಂದರು.

ABOUT THE AUTHOR

...view details