ನವದೆಹಲಿ: ಫೇಸ್ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ಗಳ ಪೂರೈಕೆ ದೇಶದಲ್ಲಿ ಸಾಕಷ್ಟಿರುವುದರಿಂದ ಅವುಗಳನ್ನು 1955 ರ ಅಗತ್ಯ ಸರಕು ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಲೀನಾ ನಂದನ್ ಹೇಳಿದ್ದಾರೆ.
ಅಗತ್ಯ ಸರಕು ಕಾಯ್ದೆಯಡಿ ಫೇಸ್ ಮಾಸ್ಕ್, ಸ್ಯಾನಿಟೈಸರ್ಗಳು ಇಲ್ಲ: ಕೇಂದ್ರ ಸರ್ಕಾರ
ಮಾರ್ಚ್ 13 ರಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಮುಂದಿನ 100 ದಿನಗಳ ವರೆಗೆ ಫೇಸ್ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ಗಳನ್ನು 'ಅಗತ್ಯ ಸರಕು'ಗಳೆಂದು ಘೋಷಿಸಿತ್ತು. ಆದರೆ ದೇಶದಲ್ಲಿ ಅವುಗಳ ಪೂರೈಕೆ ಸಾಕಷ್ಟಿದ್ದು, ಅವುಗಳನ್ನು 1955 ರ ಅಗತ್ಯ ಸರಕು ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
ಮಾರ್ಚ್ 13 ರಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಮುಂದಿನ 100 ದಿನಗಳವರೆಗೆ ಫೇಸ್ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ಗಳನ್ನು ಅಗತ್ಯ ಸರಕುಗಳೆಂದು ಘೋಷಿಸಿತ್ತು. ಆದರೆ ದೇಶದಲ್ಲಿ ಅವುಗಳ ಪೂರೈಕೆ ಸಾಕಷ್ಟಿದ್ದು, ಮತ್ತೆ ಈ ಅವಧಿಯನ್ನು ವಿಸ್ತರಿಸುವುದಿಲ್ಲ. ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಲೀನಾ ನಂದನ್ ತಿಳಿದರು.
ಮಾಸ್ಕ್ಗಳು (2-ಪ್ಲೈ ಮತ್ತು 3-ಪ್ಲೈ ಸರ್ಜಿಕಲ್ ಮಾಸ್ಕ್, ಎನ್-95 ಮಾಸ್ಕ್) ಮತ್ತು ಹ್ಯಾಂಡ್ ಸ್ಯಾನಿಟೈಸರ್ಗಳನ್ನು ಅಗತ್ಯ ಸರಕುಗಳ ಕಾಯ್ದೆಯಡಿ ತರಲಾಗಿದೆ. ಕಾಳ ಸಂತೆಯನ್ನು ತಡೆಗಟ್ಟುವ ಉದ್ದೇಶದಿಂದ ಈ ವಸ್ತುಗಳ ಉತ್ಪಾದನೆ, ವಿತರಣೆ ಮತ್ತು ಬೆಲೆಗಳನ್ನು ನಿಯಂತ್ರಿಸಲು ರಾಜ್ಯಗಳಿಗೆ ಅಧಿಕಾರ ನೀಡಲಾಗಿದೆ.