ನವದೆಹಲಿ :ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ಶ್ರೀಲಂಕಾಗೆ ಮೂರು ದಿನಗಳ ಅಧಿಕೃತ ಭೇಟಿ ನೀಡಲಿದ್ದಾರೆ. ಭೇಟಿಯ ಸಮಯದಲ್ಲಿ ಅವರು, ದ್ವಿಪಕ್ಷೀಯ ಸಂಬಂಧಗಳ ಕುರಿತು ಶ್ರೀಲಂಕಾ ವಿದೇಶಾಂಗ ಸಚಿವ ದಿನೇಶ್ ಗುಣವರ್ಧನ ಮತ್ತು ಶ್ರೀಲಂಕಾದ ನಾಯಕರೊಂದಿಗೆ ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ (ಎಮ್ಇಎ) ತಿಳಿಸಿದೆ.
ಇಂದು ಶ್ರೀಲಂಕಾಕ್ಕೆ ತೆರಳಲಿರುವ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ - ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್
ಉಭಯ ದೇಶಗಳ ನಿಕಟ ಮತ್ತು ಸೌಹಾರ್ದಯುತ ಸಂಬಂಧ ಬಲಪಡಿಸಲು ಈ ಭೇಟಿ ಮಹತ್ವಪೂರ್ಣ ಎಂದು ಎಂಇಎ ತಿಳಿಸಿದೆ. ಇಂದಿನಿಂದ ಜನವರಿ 7ರವರೆಗೆ ಸಚಿವ ಡಾ.ಎಸ್ ಜೈಶಂಕರ್ ಶ್ರೀಲಂಕಾದಲ್ಲಿರಲಿದ್ದಾರೆ..
jai shankar
ಇದು 2021ರಲ್ಲಿ ವಿದೇಶಾಂಗ ಸಚಿವರ ಮೊದಲ ವಿದೇಶ ಪ್ರವಾಸವಾಗಿದೆ. ಹೊಸ ವರ್ಷದಲ್ಲಿ ಶ್ರೀಲಂಕಾಕ್ಕೆ ವಿದೇಶಿ ಗಣ್ಯರು ಭೇಟಿ ನೀಡುವ ಮೊದಲ ಪ್ರವಾಸವೂ ಇದಾಗಿದೆ ಎಂದು (ಎಮ್ಇಎ) ಹೇಳಿದೆ.
"ಉಭಯ ದೇಶಗಳ ನಿಕಟ ಮತ್ತು ಸೌಹಾರ್ದಯುತ ಸಂಬಂಧ ಬಲಪಡಿಸಲು ಈ ಭೇಟಿ ಮಹತ್ವಪೂರ್ಣವಾಗಿದೆ" ಎಂದು ಎಂಇಎ ತಿಳಿಸಿದೆ. ಇಂದಿನಿಂದ ಜನವರಿ 7ರವರೆಗೆ ಸಚಿವ ಡಾ.ಎಸ್ ಜೈಶಂಕರ್ ಶ್ರೀಲಂಕಾದಲ್ಲಿರಲಿದ್ದಾರೆ.
TAGGED:
ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್