ಕರ್ನಾಟಕ

karnataka

ETV Bharat / bharat

ಲಾಕ್​ಡೌನ್ ಮೇ 30ರ ತನಕ ವಿಸ್ತರಿಸಿ: ಪ್ರಧಾನಿ ಮೋದಿಗೆ ಕೇಂದ್ರ ಸಚಿವ ಮನವಿ

ಕನಿಷ್ಠ ಕೆಂಪು ವಲಯಗಳಲ್ಲಿ ಮೇ 30ರವರೆಗೆ ಲಾಕ್‌ಡೌನ್ ವಿಸ್ತರಿಸಬೇಕು. ವೈರಸ್ ನಿಯಂತ್ರಣಕ್ಕೆ ಬಾರದಿದ್ದರೆ ಲಾಕ್‌ಡೌನ್ ಮೇ 30 ಮೀರಿಯೂ ವಿಸ್ತರಿಸಬೇಕು. ಹಸಿರು ವಲಯಗಳಲ್ಲಿ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗಬೇಕು ಎಂದು ಕೇಂದ್ರ ಸಚಿವ ರಾಮದಾಸ್ ಅಠವಾಲೆ ಪ್ರಧಾನಿಗೆ ಮನವಿ ಮಾಡಿದರು.

Extend lockdown
ಲಾಕ್​ಡೌನ್

By

Published : May 13, 2020, 10:27 PM IST

ನವದೆಹಲಿ:ಕೊರೊನಾ ವೈರಸ್​ ನಿಯಂತ್ರಣಕ್ಕೆ ದೇಶಾದ್ಯಂತ ವಿಧಿಸಲಾಗಿರುವ ಲಾಕ್​ಡೌನ್​ ಇನ್ನಷ್ಟು ದಿನ ವಿಸ್ತರಿಸುವಂತೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠವಾಲೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದರು.

ಆಹಾರ, ಹಣ ಮತ್ತು ಆಶ್ರಯವಿಲ್ಲದೆ ಸಾವಿರಾರು ವಲಸಿಗರು ಮನೆಗೆ ತೆರಳುವ ಬಗ್ಗೆ ಐಎಎನ್‌ಎಸ್‌ಗೆ ನೀಡಿದ ಸಂದರ್ಶನದಲ್ಲಿ ಕಳವಳ ಅವರು ವ್ಯಕ್ತಪಡಿಸಿದರು. ಅವರಿಗೆ ಸಾಕಷ್ಟು ಆಹಾರದ ಲಭ್ಯತೆ ಇದ್ದಿದ್ದರೆ ಅವರು ಇಂತಹ ಪ್ರಯಾಸಕರ ಪ್ರಯಾಣ ಮಾಡುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮನೆಗೆ ತೆರಳುವ ವಲಸೆ ಕಾರ್ಮಿಕರ ನಿರ್ಧಾರ ಸರಿಯಲ್ಲ ಎಂದರು.

ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರವು ರಾಜ್ಯದಲ್ಲಿನ ಕೊರೊನಾ ವೈರಸ್​​ ನಿಭಾಯಿಸಲು ವಿಫಲವಾಗಿದೆ. ಈ ವೈರಸ್ ಸೋಲಿಸಲು ಎಲ್ಲರೂ ಒಗ್ಗೂಡಬೇಕಾದ ಸಮಯದಲ್ಲಿ ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದರು ಎಂದು ಹೇಳಿದರು.

ನರೇಂದ್ರ ಮೋದಿ ಅವರು ಲಾಕ್​ಡೌನ್​ನಂತಹ ಸಮಯೋಚಿತ ನಿರ್ಧಾರ ತೆಗೆದುಕೊಳ್ಳದಿದ್ದರೆ ಪ್ರಕರಣಗಳು ಲಕ್ಷಗಳಿಗೆ ತಲುಪುತ್ತಿದ್ದವು. ಇನ್ನೂ ಅನೇಕರು ಸಾಯುತ್ತಿದ್ದರು. ವೈರಸ್ ಹರಡುವುದನ್ನು ನಿಯಂತ್ರಿಸಲು ಅಮೆರಿಕ ಲಾಕ್​ಡೌನ್​ ಸರಿಯಾಗಿ ಬಳಸಲಿಲ್ಲ. ಲಾಕ್‌ಡೌನ್‌ಗೂ ಮುನ್ನ ಭಾರತ ಸರಿಯಾಗಿ ಯೋಜಿಸಲಿಲ್ಲ ಎಂಬ ಸೋನಿಯಾ ಗಾಂಧಿ ಹೇಳಿಕೆ ಒಪ್ಪುವಂತಹದಲ್ಲ ಎಂದರು.

ಕನಿಷ್ಠ ಕೆಂಪು ವಲಯಗಳಲ್ಲಿ ಮೇ 30ರವರೆಗೆ ಲಾಕ್‌ಡೌನ್ ವಿಸ್ತರಿಸಬೇಕು ಎಂದು ನಾನು ಭಾವಿಸುತ್ತೇನೆ. ವೈರಸ್ ನಿಯಂತ್ರಣಕ್ಕೆ ಬಾರದಿದ್ದರೆ ಲಾಕ್‌ಡೌನ್ ಮೇ 30 ಮೀರಿಯೂ ವಿಸ್ತರಿಸಬೇಕು. ಹಸಿರು ವಲಯಗಳಲ್ಲಿ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗಬೇಕು ಎಂದು ಅಠವಾಲೆ ಮನವಿ ಮಾಡಿದರು.

ABOUT THE AUTHOR

...view details