ಕರ್ನಾಟಕ

karnataka

ETV Bharat / bharat

ಮೇ ತಿಂಗಳಲ್ಲಿ ರಫ್ತು ಪ್ರಮಾಣ ಶೇ 36 ರಷ್ಟು ಕುಸಿತ - ಆಮದು ರಫ್ತು ಸುದ್ದಿ

ಏಪ್ರಿಲ್-ಮೇ 2020 ರ ಅವಧಿಯಲ್ಲಿ ರಫ್ತು ಶೇ 47.54 ರಷ್ಟು ಕುಸಿದು 29.41 ಬಿಲಿಯನ್ ಡಾಲರ್​ಗಳಷ್ಟಿದೆ. ಹಾಗೆಯೇ ಆಮದು ಪ್ರಮಾಣವು ಶೇ 5.67 ರಷ್ಟು ಕುಸಿದು 439.32 ಬಿಲಿಯನ್​ಗೆ ತಲುಪಿವೆ. ಪ್ರಸಕ್ತ ವಿತ್ತೀಯ ವರ್ಷದ ಎರಡು ತಿಂಗಳಲ್ಲಿ ವ್ಯಾಪಾರ ಕೊರತೆ 9.91 ಬಿಲಿಯನ್​ ಡಾಲರ್​ಗಳಷ್ಟಿದೆ.

Exports fall
Exports fall

By

Published : Jun 16, 2020, 8:18 PM IST

ನವದೆಹಲಿ: ಸತತವಾಗಿ ಮೂರನೇ ತಿಂಗಳು ಭಾರತದ ರಫ್ತು ಪ್ರಮಾಣ ಕುಸಿತದತ್ತ ಸಾಗಿದ್ದು, ಮೇ ತಿಂಗಳಲ್ಲಿ ರಫ್ತು ಪ್ರಮಾಣ ಶೇ 36.47 ರಷ್ಟು ಇಳಿಕೆಯಾಗಿ 19.05 ಬಿಲಿಯನ್​ ಡಾಲರ್​ಗಳಿಗೆ ತಲುಪಿದೆ. ಪ್ರಮುಖ ವಲಯದ ಸರಕುಗಳಾದ ಪೆಟ್ರೋಲಿಯಂ, ಜವಳಿ, ಎಂಜಿನೀಯರಿಂಗ್, ವಜ್ರ ಹಾಗೂ ಒಡವೆಗಳ ಸಾಗಾಟ ಇಳಿಕೆಯಿಂದ ರಫ್ತು ಕುಂಠಿತವಾಗಿದೆ.

ಆಮದು ಪ್ರಮಾಣ ಸಹ ಶೇ 51 ರಷ್ಟು ತಗ್ಗಿದ್ದು, ಮೇ ನಲ್ಲಿ 22.2 ಬಿಲಿಯನ್ ಡಾಲರ್​ಗಳಷ್ಟಿದೆ. ಕಳೆದ ವರ್ಷದ ಇದೇ ತಿಂಗಳಿನಲ್ಲಿ ಆಗಿದ್ದ 15.36 ಬಿಲಿಯನ್​ ಡಾಲರ್​ಗಳಿಗೆ ಹೋಲಿಸಿದರೆ ಪ್ರಸಕ್ತ ಮೇ ತಿಂಗಳಲ್ಲಿ 3.15 ಬಿಲಿಯನ್ ಡಾಲರ್​ನಷ್ಟು ವ್ಯಾಪಾರ ಕೊರತೆ ಉಂಟಾಗಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ತಿಳಿಸಿದೆ.

ಏಪ್ರಿಲ್-ಮೇ 2020 ರ ಅವಧಿಯಲ್ಲಿ ರಫ್ತು ಶೇ 47.54 ರಷ್ಟು ಕುಸಿದು 29.41 ಬಿಲಿಯನ್ ಡಾಲರ್​ಗಳಷ್ಟಿದೆ. ಹಾಗೆಯೇ ಆಮದು ಪ್ರಮಾಣವು ಶೇ 5.67 ರಷ್ಟು ಕುಸಿದು 439.32 ಬಿಲಿಯನ್​ಗೆ ತಲುಪಿವೆ. ಪ್ರಸಕ್ತ ವಿತ್ತೀಯ ವರ್ಷದ ಎರಡು ತಿಂಗಳಲ್ಲಿ ವ್ಯಾಪಾರ ಕೊರತೆ 9.91 ಬಿಲಿಯನ್​ ಡಾಲರ್​ಗಳಷ್ಟಿದೆ.

ತೈಲ ಉತ್ಪನ್ನಗಳ ಆಮದು ಪ್ರಮಾಣವು ಮೇ ತಿಂಗಳಲ್ಲಿ 3.49 ಬಿಲಿಯನ್ ಡಾಲರ್​ಗಳಷ್ಟಿತ್ತು. ಕಳೆದ ವರ್ಷದ ಇದೇ ತಿಂಗಳಲ್ಲಿ ಆಗಿದ್ದ 12.44 ಬಿಲಿಯನ್​ ಡಾಲರ್​ಗಳಿಗೆ ಹೋಲಿಸಿದರೆ ಶೇ 71.98 ರಷ್ಟು ಕುಸಿತವಾಗಿದೆ.

ದೇಶದ ಸೇವಾಕ್ಷೇತ್ರ ವಲಯದ ರಫ್ತು ಪ್ರಮಾಣ ಸಹ ಏಪ್ರಿಲ್​ನಲ್ಲಿ ಶೇ 8.92 ರಷ್ಟು ಕುಸಿದು 16.45 ಬಿಲಿಯನ್ ಡಾಲರ್​ಗಳಷ್ಟಿದೆ (ಸುಮಾರು 1.25 ಲಕ್ಷ ಕೋಟಿ ರೂ.) ಎಂದು ಆರ್​ಬಿಐ ಹೇಳಿದೆ. ಚಿನ್ನಾಭರಣಗಳ ಆಮದು ಪ್ರಮಾಣ ಮೇ ನಲ್ಲಿ 98.4 ರಷ್ಟು ಕುಸಿದು 76.32 ಮಿಲಿಯನ್​ ಡಾಲರ್​ಗಳಷ್ಟಿದೆ.

ABOUT THE AUTHOR

...view details