ಭುವನೇಶ್ವರ್:ಪೆಟ್ರೋಲ್ ಪಂಪ್ವೊಂದರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿರುವ ಪರಿಣಾಮ ದಗದಗನೇ ಹೊತ್ತಿ ಉರಿದಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ.
ಭುವನೇಶ್ವರದಲ್ಲಿ ಪೆಟ್ರೋಲ್ ಬಂಕ್ನಲ್ಲಿ ಬ್ಲಾಸ್ಟ್: ಧಗಧಗನೆ ಹೊತ್ತಿ ಉರಿದ ಪಂಪ್! - ಒಡಿಶಾ ಪೆಟ್ರೋಲ್ ಬಂಕ್ನಲ್ಲಿ ಬೆಂಕಿ
ಒಡಿಶಾ ರಾಜಧಾನಿ ಭುವನೇಶ್ವರ್ದಲ್ಲಿನ ರಾಜಭವನದ ಬಳಿ ಪೆಟ್ರೋಲ್ ಬಂಕ್ ದಿಢೀರ್ ಎಂದು ಸ್ಫೋಟಗೊಂಡಿದ್ದು, ಕೆಲಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ರಾಜಭವನದ ಬಳಿ ಇರುವ ಪೆಟ್ರೋಲ್ ಪಂಪ್ನಲ್ಲಿ ಈ ಘಟನೆ ನಡೆದಿದೆ. ಸ್ಥಳದಲ್ಲಿ ಆರು ಅಗ್ನಿಶಾಮಕ ದಳಗಳು ಬೆಂಕಿ ನಂದಿಸುವ ಕೆಲಸದಲ್ಲಿ ಮಗ್ನವಾಗಿವೆ. ಘಟನೆಯಿಂದ ಮೂವರಿಗೆ ಗಂಭೀರವಾದ ಗಾಯಗಳಾಗಿವೆ ಎಂದು ಸಿಟಿ ಪೊಲೀಸ್ ಕಮಿಷನರ್ ಸುಧಾನ್ಸು ಸಾರಂಗಿ ತಿಳಿಸಿದ್ದಾರೆ. ಏಕಾಏಕಿಯಾಗಿ ಎರಡು ಪೆಟ್ರೋಲ್ ಟ್ಯಾಂಕ್ಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದಕ್ಕೆ ನಿರ್ದಿಷ್ಟವಾದ ಕಾರಣ ಗೊತ್ತಾಗಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಇನ್ನು ಘಟನೆಯಲ್ಲಿ ಗಾಯಗೊಂಡವರಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸಲಾಗುವುದು ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಣೆ ಮಾಡಿದ್ದು, ಪೆಟ್ರೋಲ್ ಪಂಪ್ ಬೆಂಕಿ ಇದೀಗ ನಿಯಂತ್ರಣಕ್ಕೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.