ಕರ್ನಾಟಕ

karnataka

ETV Bharat / bharat

ಕೃಷಿ ಮಸೂದೆಗಳ ವಿಷಯದಲ್ಲಿ ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಯತ್ನ: ರಾಜ್ಯಸಭಾ ಸದಸ್ಯ ನರೇಶ್ ಗುಜ್ರಾಲ್ ಆಕ್ರೋಶ - ಈಟಿವಿ ಭಾರತ ಜೊತೆ ನರೇಶ್ ಗುಜ್ರಾಲ್ ಮಾತು

ಈ ಬಗ್ಗೆ ಈಟಿವಿ ಭಾರತದೊಂದಿಗೆ ಎಕ್ಸ್​ಕ್ಲ್ಯೂಸಿವ್​ ಆಗಿ ಮಾತನಾಡಿದ ರಾಜ್ಯಸಭಾ ಸದಸ್ಯ ಮತ್ತು ಶಿರೋಮಣಿ ಅಕಾಲಿ ದಳದ ಮುಖ್ಯ ವಿಪ್ ನರೇಶ್ ಗುಜ್ರಾಲ್, ಇದು ಪ್ರಜಾಪ್ರಭುತ್ವಕ್ಕೆ ದುರದೃಷ್ಟಕರ ಸಂಗತಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಹರ್ಸಿಮ್ರತ್ ಕೌರ್ ಬಾದಲ್ ಅವರ ರಾಜೀನಾಮೆಯ ನಂತರ, ಅಕಾಲಿ ದಳಕ್ಕೆ ಮಸೂದೆಯ ಬಗ್ಗೆ ಚರ್ಚಿಸಲು ಕೇವಲ 2 ನಿಮಿಷಗಳನ್ನು ಮಾತ್ರ ನೀಡಲಾಗಿದೆ ಎಂದು ದಾಖಲೆಯಲ್ಲಿ ನರೇಶ್ ಗುಜರಾಲ್ ಉಲ್ಲೇಖಿಸಿದ್ದಾರೆ.

Naresh Gujaral
ರಾಜ್ಯಸಭಾ ಸದಸ್ಯ ನರೇಶ್ ಗುಜ್ರಾಲ್

By

Published : Sep 21, 2020, 8:12 PM IST

ನವದೆಹಲಿ: ಪ್ರತಿಪಕ್ಷ ಸದಸ್ಯರ ಭಾರಿ ವಿರೋಧದ ನಡುವೆಯೂ ರಾಜ್ಯಸಭೆಯಲ್ಲಿ ರೈತ ಮತ್ತು ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ-2020 ಮತ್ತು ರೈತ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದದ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ-2020 ಅಂಗೀಕಾರಗೊಂಡಿತು. ಶಿರೋಮಣಿ ಅಕಾಲಿ ದಳದ ಸದಸ್ಯರು ಮಸೂದೆಯನ್ನು ತೀವ್ರವಾಗಿ ವಿರೋಧಿಸಿ ಅದನ್ನು ದುರದೃಷ್ಟಕರ ಎಂದು ಬಣ್ಣಿಸಿದರು.

ರಾಜ್ಯಸಭಾ ಸಂಸದ ನರೇಶ್ ಗುಜ್ರಾಲ್

ಈ ಬಗ್ಗೆ ಈಟಿವಿ ಭಾರತದೊಂದಿಗೆ ಎಕ್ಸ್​ಕ್ಲ್ಯೂಸಿವ್​ ಆಗಿ ಮಾತನಾಡಿದ ರಾಜ್ಯಸಭಾ ಸದಸ್ಯ ಮತ್ತು ಶಿರೋಮಣಿ ಅಕಾಲಿ ದಳದ ಮುಖ್ಯ ವಿಪ್ ನರೇಶ್ ಗುಜ್ರಾಲ್, ಇದು ಪ್ರಜಾಪ್ರಭುತ್ವಕ್ಕೆ ದುರದೃಷ್ಟಕರ ಸಂಗತಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಹರ್ಸಿಮ್ರತ್ ಕೌರ್ ಬಾದಲ್ ಅವರ ರಾಜೀನಾಮೆಯ ನಂತರ, ಅಕಾಲಿ ದಳಕ್ಕೆ ಮಸೂದೆಯ ಬಗ್ಗೆ ಚರ್ಚಿಸಲು ಕೇವಲ 2 ನಿಮಿಷಗಳನ್ನು ಮಾತ್ರ ನೀಡಲಾಗಿದೆ ಎಂದು ದಾಖಲೆಯಲ್ಲಿ ನರೇಶ್ ಗುಜರಾಲ್ ಉಲ್ಲೇಖಿಸಿದ್ದಾರೆ.

ಮಸೂದೆ ಅಂಗೀಕಾರದ ವೇಳೆ ಮೇಲ್ಮನೆಯಲ್ಲಿನ ನಡೆದ ಧ್ವನಿ ಮತದ ಬಗ್ಗೆ ಪ್ರತಿಕ್ರಿಯಿಸಿದ ಗುಜ್ರಾಲ್, ಸದನದಲ್ಲಿ ಸಂಭವಿಸಿದ್ದೆಲ್ಲವೂ ಪ್ರಜಾಪ್ರಭುತ್ವಕ್ಕೆ ದುರದೃಷ್ಟಕರ ಸಂಗತಿ. ಈ ಮೂಲಕ ಪ್ರತಿಪಕ್ಷದ ಧ್ವನಿಯನ್ನು ನಿಗ್ರಹಿಸಲಾಗಿದೆ ಎಂದು ಹೇಳಿದರು.

ಈ ಮಸೂದೆಯನ್ನು ಅಂಗೀಕರಿಸುವುದರಿಂದ ಸರ್ಕಾರ ರೈತ ವಿರೋಧಿ ಎಂಬ ಸಂದೇಶವನ್ನು ನೀಡಿದೆ. ಮಸೂದೆಗಳು ರೈತರಿಗೆ ವರದಾನವಾಗಲಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ರೈತರಿಗೆ ಅನುಕೂಲವಾಗಲಿದೆ ಎಂದು ಸರ್ಕಾರ ಹೇಳುತ್ತಿರುವ ಮಾತು ನಮ್ಮ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಹೇಳುತ್ತಿದೆ. ಇಲ್ಲಿ ವಿಶ್ವಾಸಾರ್ಹತೆ ಮತ್ತು ಸಂವಹನದ ಕೊರತೆಯಿದೆ ಎಂದು ನಾನು ಸಂಸತ್ತಿನಲ್ಲಿ ಹೇಳಿದೆ. ಅವೆರಡನ್ನೂ ಸಂಭಾಷಣೆಯ ಮೂಲಕ ಪರಿಹರಿಸಬಹುದಾಗಿತ್ತು. ಆಯ್ಕೆ ಸಮಿತಿಯು ಆಡಳಿತ ಹಾಗೂ ಪ್ರತಿಪಕ್ಷದ ಮಾತನ್ನು ಆಲಿಸುವ ಮೂಲಕ ಸಮಸ್ಯೆಗಳನ್ನು ಬಗೆಹರಿಸುತ್ತಿತ್ತು. ಅಗತ್ಯವಿದ್ದರೆ, ಬದಲಾವಣೆಗಳನ್ನು ಮಾಡಬಹುದಿತ್ತು ಎಂದು ಗುಜ್ರಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಂಜಾಬ್ ಮತ್ತು ಹರಿಯಾಣದಲ್ಲಿ ರೈತ ಸಂಘಗಳು ಪ್ರತಿಭಟನೆ ನಡೆಸುತ್ತಿವೆ. ಇದೇ ಪ್ರತಿಭಟನೆಯ ಕಿಡಿ ಬೇರೆ ರಾಜ್ಯಗಳಲ್ಲೂ ಹತ್ತಿಕೊಳ್ಳಲಿದೆ. ವಿಶೇಷವಾಗಿ ಭಾರತ ಮತ್ತು ಚೀನಾ ನಡುವೆ ಗಡಿ ವಿವಾದ ಎದ್ದಿರುವಾಗ ಕೇಂದ್ರದ ಈ ನಿರ್ಧಾರ ದೇಶದ ಹಿತದೃಷ್ಟಿಯಿಂದ ಅಂತೂ ಅಲ್ಲವೇ ಅಲ್ಲ ಎಂದು ಜುಜ್ರಾಲ್​ ಆರೋಪಿಸಿದ್ದಾರೆ.

ಮಸೂದೆಗಳಿಗೆ ಸಹಿ ಹಾಕದೆ ಅದನ್ನು ಸಂಸತ್ತಿಗೆ ಮತ್ತೆ ಕಳುಹಿಸಿ ಎಂದು ಶಿರೋಮಣಿ ಅಕಾಲಿ ದಳ ರಾಷ್ಟ್ರಪತಿಗೆ ಮನವಿ ಮಾಡಿದೆ. ಆದರೆ ಸಂಸತ್ತಿನಲ್ಲಿ ಬಹುಮತದಿಂದ ಅಂಗೀಕರಿಸಿದ ಮಸೂದೆಗಳಿಗೆ ರಾಷ್ಟ್ರಪತಿಗಳು ಸಹಿ ಹಾಕಲಿದ್ದಾರೆ. ಆದರೆ ಶಿರೋಮಣಿ ಅಕಾಲಿ ದಳ ಮಾತ್ರ ತಮ್ಮ ಹಕ್ಕುಗಳಿಗಾಗಿ ನಿಂತಿದೆ ಎಂಬುದು ರೈತರಿಗೆ ಇದು ಒಂದು ಸಂದೇಶವಾಗಿದೆ ಎಂದು ಗುಜ್ರಾಲ್​ ಹೇಳಿದ್ದಾರೆ.

ABOUT THE AUTHOR

...view details