ರಾಜೌರಿ(ನವದೆಹಲಿ): ರಾಷ್ಟ್ರ ರಾಜಧಾನಿ ನವದೆಹಲಿ ರಾಜೌರಿ ಗಾರ್ಡನ್ ಥಾಣಾ ಪ್ರದೇಶದಲ್ಲಿ ಇಬ್ಬರು ದುಷ್ಕರ್ಮಿಗಳು ಬೈಕ್ ಮೇಲೆ ಬಂದು ಫೈರಿಂಗ್ ಮಾಡಿ ಪರಾರಿಯಾಗಿರುವ ಘಟನೆ ನಡೆದಿದ್ದು, ಇದರಿಂದ ದೆಹಲಿ ಜನರು ಹೆದರಿದ್ದಾರೆ.
ಪ್ರಾಪರ್ಟಿ ಡೀಲರ್ ಶಾಪ್ ಮೇಲೆ ಫೈರಿಂಗ್, ವಿಡಿಯೋ ವೈರಲ್ - ದೆಹಲಿಯಲ್ಲಿ ಫೈರಿಂಗ್
ಪ್ರಾಪರ್ಟಿ ಡೀಲರ್ ಶಾಪ್ ಮೇಲೆ ದುಷ್ಕರ್ಮಿಗಳಿಬ್ಬರು ಗುಂಡಿನ ದಾಳಿ ನಡೆಸಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
exclusive video rajouri garden firing in delhi
ಬ್ಲಾಕ್ ಪಲ್ಸರ್ ಮೇಲೆ ಬಂದ ಇಬ್ಬರು ಪ್ರಾಪರ್ಟಿ ಡೀಲರ್ ಆಫೀಸ್ ಮೇಲೆ ಎರಡು ಸುತ್ತು ಗುಂಡು ಹಾರಿಸಿ ಅಲ್ಲಿದ ಕಾಲ್ಕಿತ್ತಿದ್ದಾರೆ. ಈ ವೇಳೆ ಸ್ಥಳದಲ್ಲೇ ಅನೇಕರು ಉಪಸ್ಥಿತರಿದ್ದರು. ಯಾರೊಬ್ಬರು ಅವರನ್ನ ಹಿಡಿದು ಪೊಲೀಸರಿಗೆ ಒಪ್ಪಿಸುವ ಪ್ರಯತ್ನ ಮಾಡಿಲ್ಲ. ಇದರ ಎಕ್ಸ್ಕ್ಲೂ ಸಿವ್ ವಿಡಿಯೋ ಈಟಿವಿ ಭಾರತಗೆ ಲಭ್ಯವಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೇರಿಕೆ ಮಾಡಲಾಗಿದ್ದ ಲಾಕ್ಡೌನ್ನಲ್ಲಿ ಕೆಲವೊಂದು ಸಡಿಲಿಕೆ ನೀಡಲಾಗಿದ್ದು, ಇದನ್ನು ದುರುಪಯೋಗ ಪಡಿಸಿಕೊಂಡ ದುಷ್ಕರ್ಮಿಗಳು ಇದೀಗ ಅಟ್ಟಹಾಸ ಮರೆಯಲು ಮುಂದಾಗಿದ್ದಾರೆ.