ಜೈಪುರ (ರಾಜಸ್ಥಾನ): ಜೈಪುರ - ದೆಹಲಿ ಬೈಪಾಸ್‌ನಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದೆ. ಟ್ರಕ್ ಚಾಲಕ ಅಜಾಗರೂಕತೆಯಿಂದ ವೇಗವಾಗಿ ಟ್ರಕ್ ಓಡಿಸಿ 2 ಬೈಕು ಸವಾರರಿಗೆ ಹೊಡೆದಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ಮದ್ಯದ ಅಮಲಿನಲ್ಲಿ ಟ್ರಕ್ ಚಾಲನೆ: ಡ್ರೈವರ್ ಅಜಾಗರೂಕತೆಯಿಂದ ಮೂವರ ಸಾವು - ಸಿಸಿಟಿವಿ ದೃಶ್ಯಾವಳಿ
ಟ್ರಕ್ ಚಾಲಕ ಮದ್ಯ ಸೇವಿಸಿ ಅಜಾಗರೂಕತೆಯಿಂದ ಟ್ರಕ್ ಒಡಿಸಿ ಅಪಘಾತ ನಡೆಸಿದ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದೆ. ಅಪಘಾತದಲ್ಲಿ 3 ಮೂವರು ಮೃತಪಟ್ಟಿದ್ದು, 6 ಜನರು ಗಾಯಗೊಂಡಿದ್ದಾರೆ.
accident
ಬಳಿಕ ಟ್ರಕ್ ಕೂಡಾ ಉರುಳಿ ಬಿದ್ದಿದ್ದು, ಅದರಲ್ಲಿದ್ದ ಭತ್ತದ ಚೀಲಗಳ ಅಡಿ ಸಿಲುಕಿಕೊಂಡಿರುವುದು ಕೂಡಾ ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ. ಟ್ರಕ್ ಪಲ್ಟಿಯಾದ ಕೂಡಲೇ ಪಕ್ಕದಲ್ಲಿದ್ದವರು ತಮ್ಮ ಪ್ರಾಣ ಉಳಿಸಿಕೊಳ್ಳಲು ಓಡಿದ್ದಾರೆ.
ತ್ವರಿತ ಕ್ರಮ ಕೈಗೊಂಡ ಪೊಲೀಸರು ಆರೋಪಿ ಟ್ರಕ್ ಚಾಲಕನನ್ನು ಬಂಧಿಸಿದ್ದಾರೆ. ಟ್ರಕ್ ಚಾಲಕ ಮದ್ಯ ಸೇವಿಸಿದ್ದ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ 3 ಮೂವರು ಮೃತಪಟ್ಟಿದ್ದು, 6 ಜನರು ಗಾಯಗೊಂಡಿದ್ದಾರೆ.