ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿ ಪಕ್ಷದ ಮುಖಂಡರು ಬರೆದಿರುವ ಪತ್ರ ರಾಹುಲ್ ಗಾಂಧಿ ವಿರುದ್ಧದ ಪಿತೂರಿಯಾಗಿದೆ. ಇಂತಹ ಬೆಳವಣಿಗೆ ಪಕ್ಷವನ್ನು ವಿಭಜಿಸಬಹುದು ಎಂದು ಹಿರಿಯ ನಾಯಕ ಸಂಜಯ್ ನಿರುಪಮ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟು: ಸಂಜಯ್ ನಿರುಪಮ್ ಸಂದರ್ಶನ - ವಿಶೇಷ ಸಂದರ್ಶನ
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಇದು ಸೂಕ್ತ ಸಮಯವಲ್ಲ. ಇದು ಪಕ್ಷದ ನಾಯಕರೊಳಗೆ ವೈಷಮ್ಯ ಸೃಷ್ಟಿಸಿ ಪಕ್ಷವನ್ನು ವಿಭಜಿಸಬಹುದು ಎಂದು ಪಕ್ಷದ ಹಿರಿಯ ನಾಯಕ ಸಂಜಯ್ ನಿರುಪಮ್ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟಿನ ವಿಚಾರವಾಗಿ ಹಿರಿಯ ಪತ್ರಕರ್ತ ಅಮಿತ್ ಅಗ್ನಿಹೋತ್ರಿ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ, ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಇದು ಸೂಕ್ತ ಸಮಯವಲ್ಲ. ಇದು ಪಕ್ಷದ ನಾಯಕರೊಳಗೆ ವೈಷಮ್ಯ ಸೃಷ್ಟಿಸಿ ಪಕ್ಷವನ್ನು ವಿಭಜಿಸಬಹುದು ಎಂಬುದು ಕಾಂಗ್ರೆಸ್ ಕಾರ್ಯಕರ್ತನಾಗಿ ನನ್ನ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.
ನನ್ನ ಪ್ರಕಾರ 2021 ರ ಮಾರ್ಚ್-ಏಪ್ರಿಲ್ ವೇಳೆಗೆ ನಾಯಕತ್ವ ಸೇರಿದಂತೆ ಪ್ರಮುಖ ಚುನಾವಣೆಗಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಮತ್ತು ರಾಹುಲ್ ಗಾಂಧಿ ಪಕ್ಷದ ಹೊಸ ಅಧ್ಯಕ್ಷರಾಗಲಿದ್ದಾರೆ ಎಂದು ನಿರುಪಮ್ ತಿಳಿಸಿದ್ದಾರೆ.