ಕರ್ನಾಟಕ

karnataka

ETV Bharat / bharat

ಮನೆಯಲ್ಲಿಯೇ ಸುಲಭವಾಗಿ ನೀವೂ ಮಾಸ್ಕ್​ಗಳನ್ನು ತಯಾರಿಸಬಹುದು: ಹೇಗೆ ಗೊತ್ತೇ? - ಫೇಸ್ ಮಾಸ್ಕ್

ವೃತ್ತಿಯಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿರುವ ತನುಶ್ರೀ ಶರ್ಮಾ ಹತ್ತಿ ಸಹಾಯದಿಂದ ತನ್ನ ಮನೆಯಲ್ಲಿಯೇ ಮಾಸ್ಕ್​ಗಳನ್ನು ತಯಾರಿಸಿದ್ದಾರೆ. ಪತಿ ಮತ್ತು ಅತ್ತೆ-ಮಾವಂದಿರೊಂದಿಗೆ ವಾಸಿಸುತ್ತಿದ್ದ ತನುಶ್ರೀ ಅವರ ಮನೆಗೆ ತಲುಪಿದೆ. ಅವರು ಮಾಸ್ಕ್​ ತಯಾರಿಕೆಯ ಬಗ್ಗೆ ವಿವರಿಸಿದ್ದಾರೆ ನೋಡಿ..

make masks
ತನುಶ್ರೀ ಶರ್ಮಾ

By

Published : Mar 26, 2020, 12:55 PM IST

Updated : Mar 26, 2020, 2:38 PM IST

ಜೈಪುರ (ರಾಜಸ್ಥಾನ):ಕೊವಿಡ್​ -19 ಭೀತಿ ಮಧ್ಯೆ, ಮಾಸ್ಕ್​ಗಳಿಗೆ ಭಾರಿ ಬೇಡಿಕೆ ಬಂದಿದೆ. ಅನಿರೀಕ್ಷಿತವಾಗಿ ಹಾಗೂ ಏಕಾಏಕಿಯಾಗಿ ಕೊರೊನಾ ಸೋಂಕು ಆವರಿಸಿದ್ದರಿಂದ ಮುಖಗವಸುಗಳ ತಯಾರಕ ಕಂಪನಿಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಎನ್ನುವಂತಾಗಿದೆ. ಅನಿರೀಕ್ಷಿತ ಅಗತ್ಯತೆಯ ಬಗ್ಗೆ ಕಂಪನಿಗಳಿಗೆ ತಿಳಿದಿಲ್ಲವಾದ್ದರಿಂದ, ಸದ್ಯ ಮಾರುಕಟ್ಟೆಯಲ್ಲಿ ಮುಖವಾಡದ ದೊಡ್ಡ ಕೊರತೆಯಿದೆ.

ಹಾಗಾಗಿ ಭಾರತ ಸರ್ಕಾರವು ದಿನಕ್ಕೆ 20 ಮಿಲಿಯನ್ ಫೇಸ್ ಮಾಸ್ಕ್​ಗಳನ್ನು ತಯಾರಿಸಲು ಆದೇಶಿಸಿದೆ. ಇದು ಫೆಬ್ರವರಿ ಆರಂಭದಲ್ಲಿ ಮಾಡಿದ ಮೊತ್ತಕ್ಕಿಂತ 20 ಪಟ್ಟು ಹೆಚ್ಚು. ಆದರೆ ಸ್ಥಳೀಯ ಬೇಡಿಕೆಗಳನ್ನು ಪೂರೈಸಲು ಇದು ಇನ್ನೂ ಸಾಕಾಗುವುದಿಲ್ಲ. ಕೊರೊನಾ ವೈರಸ್ ವಿರುದ್ಧ ರಕ್ಷಣೆಯ ಭರವಸೆಯಲ್ಲಿ ಜನರು ಧರಿಸಲು ಇಷ್ಟಪಡುವ ಹಗುರವಾದ ಮುಖವಾಡಗಳು ಮತ್ತು ಆರೋಗ್ಯ ಕಾರ್ಯಕರ್ತರು ಬಳಸುವ ಹೆವಿ ಡ್ಯೂಟಿ ಎನ್ 95 ಮುಖವಾಡಗಳು ಕೂಡಾ ಒಳಗೊಂಡಿವೆ.

ಮನೆಯಲ್ಲಿಯೇ ಸುಲಭವಾಗಿ ನೀವೂ ಮಾಸ್ಕ್​ಗಳನ್ನು ತಯಾರಿಸಬಹುದು ಅಂತಾರೆ ತನುಶ್ರೀ

ಹಾಗಾಗಿಯೂ ನೀವು ಕರಕುಶಲ ಕಲೆಯಲ್ಲಿ ಆಸಕ್ತಿ ಹೊಂದಿದ್ದೀರೆಂದಾದರೆ ನಿಮಗೊಂದು ಆಸಕ್ತಿದಾಯಕ ಸುದ್ದಿ ಇಲ್ಲಿದೆ. ಇವರು ತನುಶ್ರೀ ಶರ್ಮಾ, ವೃತ್ತಿಯಲ್ಲಿ ಇಂಗ್ಲಿಷ್ ಶಿಕ್ಷಕಿ ಹತ್ತಿಯ ಸಹಾಯದಿಂದ ಫೇಸ್​ಮಾಸ್ಕ್​ ಹೇಗೆ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು ಎಂಬುದನ್ನು ಇವರು ತೋರಿಸಿಕೊಡುತ್ತಾರೆ. ಹತ್ತಿ ಹಾಗೂ ಟಿಶ್ಯೂ ಬ್ಯಾಗ್​ಗಳ ಸಹಾಯದಿಂದ ತನ್ನ ಮನೆಯಲ್ಲಿ ಮುಖಗವಸುಗಳನ್ನು ತಯಾರಿಸಿದ್ದಾರೆ.

ಈ ಸಂದರ್ಭ ನಮ್ಮ ವೀಕ್ಷಕರಿಗೆ ಸಹಾಯ ಮಾಡಲು, ಈಟಿವಿ ಭಾರತ್ ತಂಡ, ತನುಶ್ರೀ ಅವರ ಮನೆಯನ್ನು ತಲುಪಿದೆ.

ಅವರು ಮನೆಯಲ್ಲಿಯೇ ಹೇಗೆ ಮಾಸ್ಕ್​ ತಯಾರಿಸಬಹುದು ಎಂಬ ವಿಧಾನವನ್ನು ತಿಳಿಸಿದ್ದಾರೆ:

ಹಂತ 1: ಮುಖದ ಗಾತ್ರವನ್ನು ಅಳೆಯಿರಿ.

ಹಂತ 2:ಹತ್ತಿ ಚೀಲವನ್ನು ಚದರ ರೂಪದಲ್ಲಿ ಕತ್ತರಿಸಿ.

ಹಂತ 3:ಕಬ್ಬಿಣದ ಸಹಾಯದಿಂದ, ಚೀಲವನ್ನು ಒತ್ತಿ ಇದರಿಂದ ಅದು ಎಲ್ಲಾ ಮೂಲೆಗಳಿಂದ ಸಮತಟ್ಟಾಗುತ್ತದೆ.

ಹಂತ 4: ನಾಲ್ಕು ಮೂಲೆಗಳಲ್ಲಿ, ಒಂದೇ ಸೀಳನ್ನು ಜೋಡಿಸಿ ಇದರಿಂದ ಅದು ನಿಮ್ಮ ಮುಖಕ್ಕೆ ಕಟ್ಟುತ್ತದೆ.

ಹಂತ 5: ಬಳಸುವ ಮೊದಲು ಮುಖವಾಡವನ್ನು ಚೆನ್ನಾಗಿ ಸ್ವಚ್ಚಗೊಳಿಸಿ.

ಈಗ, ನಿಮ್ಮ ಮಾಸ್ಕ್​ ಬಳಕೆಗೆ ಸಿದ್ಧ

ತನುಶ್ರೀ ಶರ್ಮಾ ತಮ್ಮ ಕುಟುಂಬದ ಜೊತೆ..

ತನುಶ್ರೀ ಯೂಟ್ಯೂಬ್​ನಲ್ಲಿ ಏನೊ ಸರ್ಚಿಂಗ್​ ಮಾಡೋ ಸಂದರ್ಭದಲ್ಲಿ ಮನೆಯಲ್ಲಿಯೇ ಮಾಸ್ಕ್​ ತಯಾರಿಕೆಯ ವೀಡಿಯೋ ನೋಡಿದ್ದರಂತೆ, ಹಾಗಾಗಿ ಸದ್ಯ ಆ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.

ಮನೆಯಲ್ಲಿ ಮುಖವಾಡಗಳನ್ನು ಮಾಡುವ ಆಲೋಚನೆಯ ಬಗ್ಗೆ ಕೇಳಿದಾಗ, ತನುಶ್ರೀ ಅವರ ಪತಿ ವೃತ್ತಿಯಲ್ಲಿ ಗ್ರಾಫಿಕ್​ ಡಿಸೈನರ್​ ಆಗಿರುವ ಅಭಯ್ ಶರ್ಮಾ ಅವರನ್ನು ಕೇಳಿದಾಗ, "ನಾನು ಮಾರುಕಟ್ಟೆಯಿಂದ ಮುಖವಾಡವನ್ನು ಖರೀದಿಸಲು ಹೋಗಿದ್ದೆ. ಅದಕ್ಕೆ ನನಗೆ ಸುಮಾರು 100 ರೂ. ವೆಚ್ಚವಾಯಿತು. ಹೇಗಾದರೂ, ನಾನು ಒಂದು ಖರೀದಿಸಲು ಯಶಸ್ವಿಯಾಗಿದ್ದೆ. ಆದರೆ ಅನೇಕ ಜನರು ಬರೀ ಕೈಗಳಿಂದ ಮನೆಗೆ ಮರಳಿರುವುದನ್ನು ನಾನು ನೋಡಿದೆ. ನಂತರ, ನಾನು, ಹೆಂಡತಿ ಮತ್ತು ನನ್ನ ತಾಯಿ ಮಾತನಾಡಿಕೊಂಡು ಮನೆಯಲ್ಲಿಯೇ ಮುಖವಾಡಗಳನ್ನು ತಯಾರಿಸಲು ಯೋಜಿಸಿದೆ "ಎಂದು ಹೇಳಿದರು.

ಆದಾಗ್ಯೂ, ಅಭಯ್ ಶರ್ಮಾ ಅವರು, ಮೂರರಿಂದ ನಾಲ್ಕು ಬಾರಿ ಧರಿಸಿದ ನಂತರ ಮುಖವಾಡವನ್ನು ಮರುಬಳಕೆ ಮಾಡದಂತೆ ಸಲಹೆ ನೀಡಿದರು.

Last Updated : Mar 26, 2020, 2:38 PM IST

ABOUT THE AUTHOR

...view details