ಕಾಸರಗೋಡು : ಮಂಜೇಶ್ವರ ಬಳಿ ಕಾರಿನಲ್ಲಿ ಸಾಗಿಸುತ್ತಿದ್ದ 2 ಕೋಟಿ 87 ಲಕ್ಷ ರೂ. ಹವಾಲಾ ಹಣ ವಶಪಡಿಸಿಕೊಳ್ಳಲಾಗಿದೆ.
ಮಂಜೇಶ್ವರ ಬಳಿ 2.87 ಕೋಟಿ ಹವಾಲಾ ಹಣ ವಶಕ್ಕೆ ಪಡೆದ ಪೊಲೀಸರು - Excise squad seized Hawala money
ಮಂಗಳೂರಿನಿಂದ ಕೇರಳ ಕಡೆಗೆ ಸಾಗಿಸುತ್ತಿದ್ದ 2.87 ಕೋಟಿ ರೂ. ಅಕ್ರಮ ಹಣವನ್ನು ಪೊಲೀಸರು ಪತ್ತೆ ಹಚ್ಚಿದ್ದು, ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
![ಮಂಜೇಶ್ವರ ಬಳಿ 2.87 ಕೋಟಿ ಹವಾಲಾ ಹಣ ವಶಕ್ಕೆ ಪಡೆದ ಪೊಲೀಸರು Excise squad seized Hawala money](https://etvbharatimages.akamaized.net/etvbharat/prod-images/768-512-8017363-18-8017363-1594703962502.jpg)
ಕಾಸರಗೋಡಿನ ಮಂಜೇಶ್ವರ ಬಳಿ ಹವಾಲ ಹಣ ಪತ್ತೆ
ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ಮೂಲದ ಯುವಕ ಶಂಸುದ್ದೀನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತೂಮಿನಾಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ಪರಿಶೀಲಿಸುತ್ತಿದ್ದ ಅಬಕಾರಿ ದಳದ ಪೊಲೀಸರು ಕಾರಿನಲ್ಲಿ ಅಕ್ರಮ ಹವಾಲಾ ಹಣ ಸಾಗಿಸುತ್ತಿರುವುದನ್ನು ಪತ್ತೆ ಮಾಡಿದ್ದಾರೆ.
ಅಬಕಾರಿ ಪೊಲೀಸರ ತಪಾಸಣೆ ವೇಳೆ ಚೀಲದಲ್ಲಿ ಹಣ ಪತ್ತೆಯಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಮಂಜೇಶ್ವರದ ವ್ಯಕ್ತಿಯೊಬ್ಬರಿಗೆ ನೀಡಲು ಕೊಂಡೊಯ್ಯುತ್ತಿರುವುದಾಗಿ ಯುವಕ ತಿಳಿಸಿದ್ದಾನೆ. ಆರೋಪಿಯನ್ನು ಮಂಜೇಶ್ವರ ಪೊಲೀಸರಿಗೆ ಒಪ್ಪಿಸಲಾಗಿದೆ.