ತಿರುವನಂತಪುರ:ಇಲ್ಲಿನ ಅಲಮ್ಕೊಡ್ ಪ್ರದೇಶದ ಬಳಿ ಸಾಗಿಸುತ್ತಿದ್ದ 4 ಕೋಟಿ ಮೌಲ್ಯದ ಗಾಂಜಾ ಎಣ್ಣೆ ಹಾಗೂ 100 ಕೆ.ಜಿ ಗಾಂಜಾವನ್ನು ಅಬಕಾರಿ ಇಲಾಖೆ ವಶಕ್ಕೆ ಪಡೆದು ನಾಲ್ವರನ್ನು ಬಂಧಿಸಿದ್ದಾರೆ.
ತಿರುವನಂತಪುರದಲ್ಲಿ 1 ಕ್ವಿಂಟಲ್ ಗಾಂಜಾ ವಶ, ನಾಲ್ವರ ಬಂಧನ - Thiruvananthapuram
ಎರಡು ವಾಹನಗಳಲ್ಲಿ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಸರ್ಕಲ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದ ಅಬಕಾರಿ ತಂಡ ದಾಳಿ ನಡೆಸಿದೆ.
ತಿರುವನಂತಪುರ: ಬರೋಬ್ಬರಿ 100 ಕೆ.ಜಿ ಗಾಂಜಾ ವಶಕ್ಕೆ..ನಾಲ್ವರ ಬಂಧನ
ದಾಳಿಯಲ್ಲಿ ಅಲಮ್ಕೊಡ್ ನಿವಾಸಿಗಳಾದ ರಿಯಾಜ್ ಮತ್ತು ಜಾಸ್ಮಿನ್, ತ್ರಿಶೂರ್ನ ಫೈಜಲ್ ಹಾಗೂ ಕೋನಿಯ ನಿಯಾಜ್ನನ್ನು ಬಂಧಿಸಲಾಗಿದೆ.